
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಜಿಲ್ಲೆಯ ಕಾರಟಗಿ ತಾಲೂಕಿನ ಹುಳ್ಕಿಹಾಳ ಗ್ರಾಪಂ ಆವರಣದಲ್ಲಿ ಕಾಂಡೋಮ್‌ಗಳ ರಾಶಿ ಬಿದ್ದಿರುವುದು ಗ್ರಾಪಂ ಆವರಣ ಅನೈತಿಕ ಚಟುವಟಿಕೆಗಳ ತಾಣ ಎನ್ನಲು ಪುಷ್ಠಿ ನೀಡಿದಂತಿದೆ.
ಗ್ರಾಮದ ಮಹಿಳೆಯರಿಗೆ ಇದು ತೀವ್ರ ಮುಜುಗರ ತಂದಿದ್ದು, ಗ್ರಾಪಂ ಕಚೇರಿಗೆ ಕಾಲಿಡಲು ಯೋಚಿಸುವ ಪ್ರಮೇಯ ಬಂದೊದಗಿದೆ. ಪುಂಡರು ರಾಜಾರೋಷವಾಗಿ ಕಾಂಡೋಮ್‌ಗಳನ್ನು ಗ್ರಾಪಂ ಆವರಣದಲ್ಲಿ ಬಿಸಾಡಿದ್ದಾರೆ.

ಆರೋಗ್ಯ ಇಲಾಖೆ ನಿರ್ಲಕ್ಷ್ಯ
ಈಚೆಗೆ ಗ್ರಾಪಂ ಕಚೇರಿಯಲ್ಲಿ ಆರೋಗ್ಯ ಇಲಾಖೆ ಕಾರ್ಯಕ್ರಮ ಆಯೋಜಿಸಿತ್ತು. ಆ ವೇಳೆ ಕಾಂಡೋಮ್‌ಗಳ ಪೆಟ್ಟಿಗೆಯನ್ನು ಶೌಚಾಲಯದಲ್ಲಿ ಇಟ್ಟಿದ್ದರೆ ಅಗತ್ಯ ಇರುವವರು ಮಾತ್ರ ಬಳಸುತ್ತಿದ್ದರು. ಆದರೆ ಕಾಂಡೋಮ್‌ಗಳ ಪೆಟ್ಟಿಗೆಯನ್ನು ಕಚೇರಿ ಮುಂಭಾಗದಲ್ಲೇ ಹಾಕಿದ್ದರಿಂದ ಕಚೇರಿ ಸಮಯದ ನಂತರ ಕಿಡಿಗೇಡಿಗಳು ಬಂದು ಈ ರೀತಿ ಮಾಡಿದ್ದಾರೆ. ವಿಷಯ ನನ್ನ ಗಮನಕ್ಕೆ ತಂದಿದ್ದೀರಿ. ತಕ್ಷಣಚೇ ಅದನ್ನು ತೆರವುಗೊಳಿಸುತ್ತೇನೆ.
-ವೆಂಕಟೇಶ ನಾಯಕ್, ಪಿಡಿಓ, ಹುಳ್ಕಿಹಾಳ ಗ್ರಾಪಂ



