HomeDharwadಜನತಾ ದರ್ಶನದಲ್ಲಿ 125 ಅಹವಾಲು ಸಲ್ಲಿಕೆ

ಜನತಾ ದರ್ಶನದಲ್ಲಿ 125 ಅಹವಾಲು ಸಲ್ಲಿಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೋಮವಾರ ಬೆಳಿಗ್ಗೆ 9ನೇ ಜನತಾ ದರ್ಶನವನ್ನು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಸಿ, ಸಾರ್ವಜನಿಕರಿಂದ 125 ದೂರು, ಅಹವಾಲುಗಳನ್ನು ಸ್ವೀಕರಿಸಿದರು.

ಇವುಗಳಲ್ಲಿ ಕಂದಾಯ 31, ಮಹಾನಗರ ಪಾಲಿಕೆ 26, ಜಿಲ್ಲಾ ಪಂಚಾಯಿತಿ 18, ಕಾರ್ಮಿಕ ಇಲಾಖೆ 16, ಪೊಲೀಸ್ ಇಲಾಖೆ 6, ಶಿಕ್ಷಣ ಇಲಾಖೆ 5 ಮತ್ತು ಇತರೆ 23 ಅಹವಾಲುಗಳು ಸೇರಿ ಒಟ್ಟು 125 ದೂರುಗಳಿವೆ. ಇವುಗಳನ್ನು ಸೂಕ್ತವಾಗಿ, ನಿಯಮಾನುಸಾರ ಪರಿಶೀಲಿಸಿ, ಕಾಲಮಿತಿಯಲ್ಲಿ ವಿಲೇವಾರಿ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಳೆದ 8 ಜನತಾ ದರ್ಶನಗಳಲ್ಲಿ ಸಾರ್ವಜನಿಕರಿಂದ ಒಟ್ಟು 1,655 ಅಹವಾಲುಗಳನ್ನು ಸ್ವೀಕರಿಸಿ, ಸೂಕ್ತವಾಗಿ ವಿಲೇವಾರಿ ಮಾಡಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!