ವಿಜಯಸಾಕ್ಷಿ ಸುದ್ದಿ, ಗದಗ: ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ ಸಮಾನತೆ ಸಮಿತಿ ವತಿಯಿಂದ ಡಾ. ಅಂಬೇಡ್ಕರರ ಪುತ್ಥಳಿಗೆ ಮಾಲಾರ್ಪಣೆ 207ನೇ ಭೀಮ್ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗೋವಿಂದರಾಜ ಬಳ್ಳಾರಿ ಮಾತನಾಡಿ, ನಮ್ಮ ಸ್ವಾಭಿಮಾನದ ಬದುಕಿಗೆ 500 ಜನ ವೀರ ಮಹಾರ್ (ದಲಿತ) ಯೋಧರು ಸ್ವಾಭಿಮಾನಕ್ಕಾಗಿ, ಸ್ವಾಭಿಮಾನದ ಬದುಕಿಗಾಗಿ ಹೋರಾಡಿದ ವಿಶ್ವದ ಐತಿಹಾಸಿಕ ಏಕೈಕ ಘನಘೋರ ಯುದ್ಧ ನಡೆದಿರುವ ಭಿಮಾ ಕೋರೆಗಾವ್ ವಿಜಯ್ ಶೌರ್ಯ ಸ್ತಂಭದ ಕುರಿತು ಡಾ. ಬಾಬಾಸಾಹೇಬ ಅಂಬೇಡ್ಕರರು ಅನೇಕ ವಿಷಯಗಳನ್ನು ಕಲೆ ಹಾಕಿ ಅಧ್ಯಯನ ಮಾಡಿ ನಮ್ಮೆಲ್ಲರಿಗೂ ವಿಜಯೋತ್ಸವದ ಬಗ್ಗೆ ತಿಳಿಸಿಕೊಟ್ಟಿದ್ದಕಾಗಿ ನಾವು ಅವರಿಗೆ ಚಿರಋಣಿಗಳಾಗಿದ್ದೇವೆ ಎಂದು ತಿಳಿಸಿದರು.
ಯುವರಾಜ ಬಳ್ಳಾರಿ ಮಾತನಾಡಿದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ವೆಂಕಟೇಶಯ್ಯ, ಮಹೇಶ ನಾನಬಾಲ, ಸುಂಕಪ್ಪ ಗುತ್ತಿ, ನಾಗರಾಜ ಕಿನ್ನಾರಿ, ಸಣ್ಣರಾಮು ಪಿ.ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು.



