HomeGadag Newsಎಲ್‌ಐಸಿ ಅತಿ ದೊಡ್ಡ ವಿಮಾ ಸಂಸ್ಥೆಯಾಗಿದೆ : ಎಸ್‌ಡಿಎಂ ಚಕ್ರವರ್ತಿ

ಎಲ್‌ಐಸಿ ಅತಿ ದೊಡ್ಡ ವಿಮಾ ಸಂಸ್ಥೆಯಾಗಿದೆ : ಎಸ್‌ಡಿಎಂ ಚಕ್ರವರ್ತಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಜೀವ ವಿಮಾ ನಿಗಮ ಗದಗ 1ನೇ ಶಾಖೆಯ 45ನೇ ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್‌ಡಿಎಂಬಿಎಸ್ ಚಕ್ರವರ್ತಿ, ಎಂಎಂ ರತ್ನಪ್ರಭಾ ಮತ್ತು ಎಂಎಸ್ ಚಿದಾನಂದ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂ ಚಕ್ರವರ್ತಿ ಮಾತನಾಡಿ, ಎಲ್‌ಐಸಿ ದೇಶದಲ್ಲೇ ಅತಿ ದೊಡ್ಡ ವಿಮಾ ಸಂಸ್ಥೆಯಾಗಿದ್ದು, ಈ ವಿಮಾ ಸಂಸ್ಥೆ ತನ್ನ ಗ್ರಾಹಕರ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿದ್ದು, ಇದೀಗ ತನ್ನ ಎಲ್ಲಾ ಪಾಲಿಸಿಗಳನ್ನು ಹೊಸದಾಗಿ ನವೀಕರಿಸಿದೆ. ಗ್ರಾಹಕರು ಹೆಚ್ಚು ಹೆಚ್ಚು ಪಾಲಿಸಿಗಳನ್ನು ಪಡೆದು ತಮ್ಮ ಜೀವನವನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳಬೇಕು ಎಂದು ಹೇಳಿದರು.

ಎಂಎಂ ರತ್ನಪ್ರಭಾ ಮಾತನಾಡಿ, ಗದಗ 1ನೇ ಶಾಖೆ ಧಾರವಾಡ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಈ ಸ್ಥಾನ ಪಡೆಯಲು ವಿಮಾ ಪ್ರತಿನಿಧಿಗಳು ಶ್ರಮ ವಹಿಸಿದ್ದಾರೆ. ಭಾರತೀಯ ಜೀವ ವಿಮಾ ನಿಗಮ ಭಾರತ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಎಲ್ಲಾ ಶೇರುಗಳನ್ನು ಸರ್ಕಾರದ ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿಸಿದೆ ಎಂದು ಹೇಳಿದರು.

ಧಾರವಾಡದ ಎಂಎಸ್ ಚಿದಾನಂದ ಉಪಸ್ಥಿತರಿದ್ದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಭಾರತೀಯ ಜೀವ ವಿಮಾ ನಿಗಮದ ಮುಖ್ಯ ಶಾಖಾಧಿಕಾರಿ ಭಜಂತ್ರಿ ವಹಿಸಿದ್ದರು. ಅಭಿವೃದ್ಧಿ ಅಧಿಕಾರಿಗಳು, ವಿಮಾ ನೌಕರರು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು. ಉಪಶಾಖಾಧಿಕಾರಿ ಮಹಾಂತೇಶ ಕಾರ್ಯಕ್ರಮ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!