HomeSports NewsCSK vs SRH: ತವರಿನಲ್ಲೇ 4ನೇ ಹೀನಾಯ ಸೋಲು! CSK ಕ್ಯಾಪ್ಟನ್‌ ಎಂಎಸ್ ಧೋನಿ ಹೇಳಿದ್ದೇನು..?

CSK vs SRH: ತವರಿನಲ್ಲೇ 4ನೇ ಹೀನಾಯ ಸೋಲು! CSK ಕ್ಯಾಪ್ಟನ್‌ ಎಂಎಸ್ ಧೋನಿ ಹೇಳಿದ್ದೇನು..?

For Dai;y Updates Join Our whatsapp Group

Spread the love

ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್​ 2025) 43ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ತಂಡ ಜಯ ಸಾಧಿಸಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೀಡಿದ 155 ರನ್​ಗಳ ಸುಲಭ ಗುರಿ ಬೆನ್ನತ್ತಿದ ಸನ್​ರೈಸರ್ಸ್ ಹೈದರಾಬಾದ್ ಪರ ಎಡಗೈ ದಾಂಡಿಗ ಕಮಿಂದು ಮೆಂಡಿಸ್ 22 ಎಸೆತಗಳಲ್ಲಿ 3 ಫೋರ್​ಗಳೊಂದಿಗೆ ಅಜೇಯ 32 ರನ್ ಬಾರಿಸಿದರು. ಮತ್ತೊಂದೆಡೆ ನಿತೀಶ್ ಕುಮಾರ್ ರೆಡ್ಡಿ 13 ಎಸೆತಗಳಲ್ಲಿ 2 ಫೋರ್​ಗಳೊಂದಿಗೆ ಅಜೇಯ 19 ರನ್ ಸಿಡಿಸಿದರು. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು 18.4 ಓವರ್​ಗಳಲ್ಲಿ ಗುರಿ ಮುಟ್ಟಿಸಿ 5 ವಿಕೆಟ್​ಗಳ ಜಯ ತಂದುಕೊಟ್ಟಿದ್ದಾರೆ.

ತಂಡದ ಸೋಲಿನ ನಂತರ, ನಾಯಕ ಧೋನಿ ಬೇಸರ ವ್ಯಕ್ತಪಡಿಸಿ, ತಮ್ಮ ತಂಡ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇತ್ತು, ಇದರಿಂದಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸುವುದು ಕಷ್ಟವಾಯಿತು ಎಂದು ಹೇಳಿದರು. ಮೊದಲ ಇನ್ನಿಂಗ್ಸ್ ಪಿಚ್ ಉತ್ತಮವಾಗಿದೆ ಎಂದು ನಾಯಕ ಬಣ್ಣಿಸಿದರೂ, ಚೆಂಡು ಹೆಚ್ಚು ತಿರುವು ಪಡೆಯುತ್ತಿರಲಿಲ್ಲವಾದ್ದರಿಂದ ಆ ಪಿಚ್‌ನಲ್ಲಿ 155 ರನ್‌ಗಳ ಸ್ಕೋರ್ ಸಮರ್ಥನೀಯವಲ್ಲ ಎಂದು ಒಪ್ಪಿಕೊಂಡರು. ‘ಹೌದು, 8 ರಿಂದ 10 ಓವರ್‌ಗಳ ನಂತರ ಪಿಚ್ ವೇಗದ ಬೌಲರ್‌ಗಳಿಗೆ ಸ್ವಲ್ಪ ಭಿನ್ನವಾಯಿತು, ಆದರೆ ನಾವು ನಮ್ಮ ಖಾತೆಗೆ ಇನ್ನೂ ಕೆಲವು ರನ್‌ಗಳನ್ನು ಸೇರಿಸಬೇಕಾಗಿತ್ತು’ ಎಂದು ಹೇಳಿದ್ದಾರೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಪಿನ್ನರ್‌ಗಳಿಗೆ ಸ್ವಲ್ಪ ಸಹಾಯ ಸಿಕ್ಕಿತು ಮತ್ತು ಅವರು ಉತ್ತಮ ಲೈನ್ ಮತ್ತು ಲೆಂತ್‌ನಲ್ಲಿ ಬೌಲಿಂಗ್ ಮಾಡಿದರು, ಆದರೆ ತಂಡವು ಸುಮಾರು 15-20 ರನ್‌ ಕಡಿಮೆ ಗಳಿಸಿತು ” ಎಂದು ಧೋನಿ ಹೇಳಿದರು. ಬ್ರೆವಿಸ್ ಬ್ಯಾಟಿಂಗ್ ಅನ್ನು ಶ್ಲಾಘಿಸಿದ ನಾಯಕ, ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಇದೇ ರೀತಿಯ ಬ್ಯಾಟ್ಸ್‌ಮನ್ ಅಗತ್ಯವಿದೆ,

ವಿಶೇಷವಾಗಿ ಸ್ಪಿನ್ನರ್‌ಗಳು ದಾಳಿಗೆ ಇಳಿದಾಗ ಎಂದು ಹೇಳಿದರು. ನಾವು ಬ್ಯಾಟಿಂಗ್ ಮೂಲಕ ಅಥವಾ ದೊಡ್ಡ ಹೊಡೆತಗಳನ್ನು ಹೊಡೆಯುವ ಮೂಲಕ ಆ ಒತ್ತಡವನ್ನು ನಿವಾರಿಸಿಕೊಳ್ಳಬೇಕು. ಇಲ್ಲಿಯೇ ನಾವು ಹಿಂದುಳಿದಿದ್ದೇವೆ ಮತ್ತು ಸ್ಪಿನ್ ವಿರುದ್ಧ ತ್ವರಿತ ರನ್ ಗಳಿಸುವಲ್ಲಿ ವಿಫಲರಾಗಿದ್ದೇವೆ. ಅಂತಹ ಪಂದ್ಯಾವಳಿಗಳಲ್ಲಿ ಕೆಲವು ನ್ಯೂನ್ಯತೆಗಳನ್ನು ಸುಧಾರಿಸುವ ಮೂಲಕ ತಂಡವನ್ನು ಬಲಪಡಿಸಬೇಕು ಎಂದು ಅವರು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!