HomeGadag Newsಡಾ. ಪಂಡಿತ್ ಪುಟ್ಟರಾಜ ರೈತ ಸಂಘದ ಪದಾಧಿಕಾರಿಗಳ ಆಯ್ಕೆ

ಡಾ. ಪಂಡಿತ್ ಪುಟ್ಟರಾಜ ರೈತ ಸಂಘದ ಪದಾಧಿಕಾರಿಗಳ ಆಯ್ಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಾಜ್ಯ ಡಾ. ಪಂಡಿತ್ ಪುಟ್ಟರಾಜ ರೈತ ಸಂಘದ ಸವದತ್ತಿ ತಾಲೂಕ ಘಟಕ ಹಾಗೂ ಯಡ್ರಾವಿ, ಸುತಗಟ್ಟಿ ಗ್ರಾಮ ಘಟಕಗಳನ್ನು ಇತ್ತೀಚೆಗೆ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಪಿ ಮುಳುಗುಂದ ಹಾಗೂ ಸಂಘದ ರಾಜ್ಯ ಉಪಾಧ್ಯಕ್ಷ ದಾವಲಸಾಬ್ ನಾಗನೂರ, ಎಚ್.ಎಚ್. ಕೊಪ್ಪಳ, ಶಬ್ಬೀರ್ ಮುಲ್ಲಾ, ಎಂ.ಪಿ. ಶಲವಡಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಉಮೇಶ್ ಗೋವನಕೊಪ್ಪ ಇವರನ್ನು ನೇಮಿಸಿ ಆದೇಶ ಪ್ರತಿಯನ್ನು ನೀಡಲಾಯಿತು.

ಸವದತ್ತಿ ತಾಲೂಕಾಧ್ಯಕ್ಷರಾಗಿ ಕೆಂಚಪ್ಪ ಬಿದರಗಟ್ಟಿ, ಉಪಾಧ್ಯಕ್ಷರಾಗಿ ಭೀಮಪ್ಪ ಜೇಡರ, ಪರಿಶಿಷ್ಟ ಪಂಗಡದ ಅಧ್ಯಕ್ಷರಾಗಿ ರಾಮಪ್ಪ ಹಾಸಟಿ, ಪರಿಶಿಷ್ಟ ಪಂಗಡ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಅರ್ಪಿತಾ ಹೊಸಟ್ಟಿ, ಸುತಗಟ್ಟಿ ಗ್ರಾಮ ಘಟಕದ ಅಧ್ಯಕ್ಷರಾಗಿ ಶಿವಜಾತಯ್ಯ ಹಿರೇಮಠ, ಸವದತ್ತಿ ಯುವ ಘಟಕದ ಅಧ್ಯಕ್ಷರಾಗಿ ಮನೋಹರ ಸೊಗಲದ, ಗ್ರಾಮ ಘಟಕದ ಸದಸ್ಯರಾಗಿ ಲಗ್ನವರ, ಸೊಗಲದ, ಸಿದ್ದಪ್ಪ ಮುತ್ನಾಳ್, ಬಸವಂತ ಮುದ್ನಾಳ ಮುಂತಾದವರನ್ನು ಆಯ್ಕೆ ಮಾಡಲಾಯಿತು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!