ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ 2ನೇ ವಾರ್ಷಿಕೋತ್ಸವದ ನಿಮಿತ್ತ ಪೂರ್ವ ಸಿದ್ಧತಾ ಸಭೆ ರವಿವಾರ ಮುಳಗುಂದ ಪಟ್ಟಣದ ಶ್ರೀಪಾದನಾಯಕ ಶಂಕರನಾಯಕ ತಮ್ಮಣ್ಣವರ (ಚೀನಿವಾಲರ) ಇವರ ಮನೆಯಲ್ಲಿ ಜರುಗಿತು.
ಸಭೆಯಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ, ಶ್ರೀಪತಿ ಉಡುಪಿ, ಅನಿಲ ತೆಂಬದಮನಿ, ಶ್ರೀಪಾದನಾಯಕ ಎಸ್.ತಮ್ಮಣ್ಣವರ, ಗಣೇಶ ಕುರಂದವಾಡ, ಗೋವಿಂದ್ ಆರ್. ಇಂಗಳಗಿ, ಭೀಮಣ್ಣ ಕುಲಕರ್ಣಿ, ವಿಶ್ವನಾಥ್ ದೇಸಾಯಿ, ನಾಗೇಶ ಬೇಗೂರು, ಪ್ರಮೋದ ಡಂಬಳ, ನಾಗರಾಜ ತಮ್ಮಣ್ಣವರ, ನರಸಿಂಹಭಟ್ ಸೊರಟೂರ್, ಸಂದೇಶ ಕುಲಕರ್ಣಿ, ಗೋಪಾಲ ಗುಡಿ, ಶ್ರೀಕಾಂತ್ ಗುಡಿ, ಕೃಷ್ಣಾಜಿ ನಾಡಿಗೇರ ಮುಂತಾದವರು ಭಾಗವಹಿಸಿದ್ದರು.



