HomeEducationಮಕ್ಕಳಿಗೆ ಸಂಸ್ಕೃತಿ, ಸಂಪ್ರದಾಯಗಳನ್ನು ಕಲಿಸಿ : ರಾಜಶೇಖರ ಶಿರಹಟ್ಟಿ

ಮಕ್ಕಳಿಗೆ ಸಂಸ್ಕೃತಿ, ಸಂಪ್ರದಾಯಗಳನ್ನು ಕಲಿಸಿ : ರಾಜಶೇಖರ ಶಿರಹಟ್ಟಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮೀಪದ ಉಳ್ಳಟ್ಟಿಯ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಶುಕ್ರವಾರ ಪ್ರವೇಶ ಪಡೆದ ಮಕ್ಕಳಿಗಾಗಿ ಅಕ್ಷರಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಯಿಯ ತೊಡೆಯ ಮೇಲೆ ಕುಳಿತ ಮಕ್ಕಳಿಗೆ ಶಾಸ್ತ್ರೋಕ್ತವಾಗಿ ಅಕ್ಕಿಯಲ್ಲಿ ಅಕ್ಷರವನ್ನು ಬರೆಸುವ ಮೂಲಕ ಮಕ್ಕಳ ಪ್ರಥಮ ಅಕ್ಷರಾಭ್ಯಾಸಕ್ಕೆ ನಾಂದಿ ಹಾಡಲಾಯಿತು.

ಶಾಲೆಯ ಉಪಾಧ್ಯಾಕ್ಷ ರಾಜಶೇಖರ ಶಿರಹಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಾರಂಭದ ಹಂತವು ಉತ್ತಮವಾಗಿರಬೇಕು. ಈ ಮೂಲಕ ಮಕ್ಕಳು ವಿದ್ಯಾವಂತರಾಗಿ ನಾಡಿಗೆ ಒಳ್ಳೆಯ ಪ್ರಜೆಗಳಾಗಿ ಸಾಧನೆ ಮಾಡಬೇಕೆನ್ನುವ ಉದ್ದೇಶದಿಂದ ಸರಸ್ವತಿಯ ಸನ್ನಿಧಾನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸಲಾಗುತ್ತಿದೆ. ಇಂದಿನ ಮಕ್ಕಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಮತ್ತು ಉತ್ತಮ ಭಾರತೀಯ ಸಂಸ್ಕಾರದೊಂದಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ.

ಮಕ್ಕಳಿಗೆ ನಮ್ಮ ಸಂಸ್ಕಾರ, ಪದ್ಧತಿಗಳನ್ನು ಕಲಿಸುವ ಕಾರ್ಯವನ್ನು ಮಾಡುವದು ಹೆಚ್ಚು ಅಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ರತ್ನಾ ಕುಂಬಾರ, ಅನ್ನಪೂರ್ಣ ಗುಡ್ಡಿಮಠ, ವಿಜಯಲಕ್ಷ್ಮಿ ರಗಟಿ, ಸಂಗೀತಾ ಕೊಂಚಿಗೇರಿ, ಮೀನಾಕ್ಷಿ ಮಡಿವಾಳರ, ಮೋಕ್ಷಾ ಪಟೇಲ್, ಅನಿತಾ ದೋಪದ, ಭಾರತಿ ದೇಸಾಯಿ, ದೀಪಾ ಪವಾಡಶೆಟ್ಟರ, ಅನಿತಾ ಬಳ್ಳಾರಿ ಉಮಾ ಅಳಲಗೇರಿ, ರಾಜೇಶ್ವರಿ ನವಲಿ ಮತ್ತು ಪಾಲಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img