HomeGadag Newsಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾ ಅಂಚೆ ಮುಖ್ಯಸ್ಥರಿಗೆ ಮನವಿ

ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾ ಅಂಚೆ ಮುಖ್ಯಸ್ಥರಿಗೆ ಮನವಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಹೊಳೆ ಆಲೂರ ಪೋಸ್ಟ್ ಆಫೀಸ್ ಶಾಖೆಯಲ್ಲಿ ಎಟಿಎಂ, ಪೋಸ್ಟ್ ಆಫೀಸ್‌ನಲ್ಲಿ ಜನತೆಗೆ ದೊರಕುವ ಸೌಲಭ್ಯಗಳನ್ನು ಒದಗಿಸುವಂತೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಎಂ.ಎ ಕುರ್ತಕೋಟಿ ಹಾಗೂ ರೋಣ ತಾಲೂಕು ಘಟಕದ ಅಧ್ಯಕ್ಷರಾದ ಎಮ್.ಎಚ್. ನದಾಫ್ ನೇತೃತ್ವದಲ್ಲಿ ಗದಗ ಜಿಲ್ಲಾ ಅಂಚೆ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು.

ಎಮ್.ಎಚ್. ನದಾಫ್ ಮನವಿ ಸಲ್ಲಿಸಿ ಮಾತನಾಡಿ, ರೋಣದ ಹೊಳೆಆಲೂರ ಗ್ರಾಮದ ಪೋಸ್ಟ್ ಆಫೀಸಿನಲ್ಲಿ ಸರ್ಕಾರದ ಪಿಂಚಣಿ ಸೇರಿದಂತೆ ಇತರೆ ಹಣವನ್ನು ಪಡೆಯಲು ಒಂದೇ ಕೌಂಟರ್ ಇದ್ದು, ಅನಾನುಕೂಲವಾಗುತ್ತಿದೆ. ಹೀಗಾಗಿ, ಇನ್ನೊಂದು ಕೌಂಟರ್ ಪ್ರಾರಂಭಿಸಬೇಕು. ಗ್ರಾಮದ ಜನರ ಅನುಕೂಲಕ್ಕಾಗಿ ಒಂದು ಎಟಿಎಂ ಪ್ರಾರಂಭಿಸಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಬೆಟಗೇರಿ ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ್ ಗಾರವಾಡ, ಇಮ್ರಾನ್ ಕಲೆಗಾರ್, ಪ್ರವೀಣ್ ಚಾವಲಾ, ಕಾಸಿಂ ಚಪ್ಪರಬಂದ, ಪ್ರವೀಣ ಕರುಗಲ್ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img