HomeGadag Newsಅಂಜುಮನ್ ಸಂಸ್ಥೆಯ ಚುನಾವಣೆಗೆ ಆಗ್ರಹ

ಅಂಜುಮನ್ ಸಂಸ್ಥೆಯ ಚುನಾವಣೆಗೆ ಆಗ್ರಹ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಅಂಜುಮನ್ ಸಂಸ್ಥೆಯ ಚುನಾವಣೆಯನ್ನು ಶೀಘ್ರವಾಗಿ ನಡೆಸುವಂತೆ ಆಗ್ರಹಿಸಿ ಮುಸ್ಲಿಂ ಬಾಂಧವರಿಂದ ಜಿಲ್ಲಾ ವಕ್ಫ್ ಇಲಾಖೆಯ ಅಧಿಕಾರಿಗಳಿಗೆ ಮತ್ತು ವಕ್ಫ್ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

ಗದಗ ನಗರದಲ್ಲಿ ಸುಮಾರು 15 ವರ್ಷಗಳಿಂದ ಚುನಾವಣೆ ನಡೆದಿಲ್ಲ ಮತ್ತು ಇಲಾಖೆಯವರು 11 ತಿಂಗಳ ಮಟ್ಟಿಗೆ ಅಂಜುಮನ್ ಸಂಸ್ಥೆಗೆ ಚುನಾವಣೆಯವರೆಗೂ ಕಾರ್ಯನಿರ್ವಹಿಸಲು ಅಡಕ್ ಕಮಿಟಿ ನಿರ್ಮಿಸಿ ಕೈ ತೊಳೆದುಕೊಂಡಿದ್ದರು. ಅಡಕ್ ಕಮಿಟಿಯ ನೇತೃತ್ವದಲ್ಲಿ ಅಂಜುಮನ್ ಸಂಸ್ಥೆ ಕಾರ್ಯನಿರ್ವಹಿಸಿದರೂ ಸಮಾಜದವರಿಗೆ ಅಂಜುಮನ್ ಸಂಸ್ಥೆಯ ಚುನಾವಣೆ ನಡೆಯಬೇಕೆಂಬ ಹೆಬ್ಬಯಕೆ ಇತ್ತು. ಈಗ, ನಗರದ ಎಲ್ಲ ಉತ್ಸಾಹಿ ಯುವಕರು ಚುನಾವಣೆ ನಡೆಸುವ ಉದ್ದೇಶದಿಂದ ಹಲವು ದಿನಗಳ ಚರ್ಚೆಯ ನಂತರ ಸಾರ್ವಜನಿಕವಾಗಿ ಮನವಿ ಸಲ್ಲಿಸಿದರು.

ವಕ್ಫ್ ಅಧ್ಯಕ್ಷರಾದ ದಂಡಿನವರು ತ್ವರಿತವಾಗಿ ಸರ್ಕಾರಕ್ಕೆ ಚುನಾವಣೆ ನಡೆಸುವಂತೆ ಪ್ರಸ್ತಾನೆಯನ್ನು ಕಳುಹಿಸಿ, ಒಂದು ತಿಂಗಳ ಒಳಗಾಗಿ ಎಲೆಕ್ಷನ್ ಘೋಷಣೆ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಎಮ್.ಇಸ್ಮಾಯಿಲ್‌ಸಾಬ್, ಯೂಸುಫ್ ಡಂಬಳ್, ಹಾಜಿಅಲಿ ಕೊಪ್ಪಳ, ಚಾಂದ್ ಕೊಟ್ಟೂರ, ಬಿಲಾಲ್ ಗೋಕಾವಿ, ರಫೀಕ್ ಅಬ್ಬಿಗೇರಿ, ಏಮ್ ಮೌಲ್ವಿ ವಕೀಲರು, ಬೇಪಾರಿ ವಕೀಲರು, ರಫೀಕ್ ಧಾರವಾಡ, ಇರ್ಷಾದ್ ಕಾಗದಗಾರ, ರಫೀಕ್ ಬದ್ನಿ, ಇರ್ಷಾದ್ ಮಾನ್ವಿ, ಜಾಫರ್ ಹೊಂಬಳ, ಯಾಸೀನ್ ಹುಬ್ಬಳ್ಳಿ, ಹಿದಾಯತುಲ್ ಕಾಗದಗಾರ, ಸಮೀರ್ ದಂಡಿನ, ಸಿರಾಜ್ ಕದಡಿ, ಸಲ್ಮಾನ್ ಬನ್ನೂರ್, ಸಾದಿಕ್ ಬುರಬುರೆ, ಜಿಲ್ಹಾನಿ ಲಕ್ಕುಂಡಿ, ಮದಾರ್ ಭೈ, ಮುಸ್ತಾಕ್ ಕಟ್ಟಿಮನಿ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img