ಬೆಂಗಳೂರು: ಇಡಿ ಅಧಿಕಾರಿಗಳಿಂದ ಶಾಸಕ ನಾಗೇಂದ್ರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸದಾಶಿವನಗರದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ಎಸ್ಐಟಿ ಪೊಲೀಸರು ತನಿಖೆ ನಡೆಸುತ್ತಿದ್ದರು.
ಇಡಿಯವ್ರು ಇದ್ದಕ್ಕಿದ್ದಂತೆ ಎಂಟ್ರಿ ಕೊಟ್ಟಿದ್ದಾರೆ. ಇಡಿ, ಸಿಬಿಐನ ರಾಜಕೀಯವಾಗಿ ಇದನ್ನ ಉಪಯೋಗಿಸಬಾರದೆಂಬುದು ನಮ್ಮ ಅನಿಸಿಕೆ ಎಂದು ಹೇಳಿದರು. ಇನ್ನೂ ಇವುಗಳು ರಾಜಕೀಯ ಅಸ್ತ್ರ ಆಗಬಾರದು, ತನಿಖೆ ಮಾಡುವುದರಲ್ಲಿ ಹಸ್ತಕ್ಷೇಪ ಇಲ್ಲ ಎಂದು ತಿಳಿಸಿದ್ರು.



