HomeGadag Newsಮಹರ್ಷಿ ವೇದವ್ಯಾಸ ಜಯಂತಿ ಆಚರಣೆ

ಮಹರ್ಷಿ ವೇದವ್ಯಾಸ ಜಯಂತಿ ಆಚರಣೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಟ್ರಸ್ಟ್ ವತಿಯಿಂದ ಮಹರ್ಷಿ ವೇದವ್ಯಾಸರ ಜಯಂತಿಯನ್ನು ನಗರದ ಸುಣಗಾರ ಓಣಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಮಹಾದೇವ ಬಾಣದ ಮಾತನಾಡಿ, ಸಮಾಜ ಬಾಂಧವರು ಪೂರ್ವಜರ ವಿಶೇಷ ಸಂಸ್ಕೃತಿ ನೀಡಿದ ವೇದಗಳನ್ನು ನಾಡಿಗೆ ಕೊಡುಗೆ ನೀಡಿದ ಮಹರ್ಷಿ ವೇದವ್ಯಾಸ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿ ಎಂದರು.

ಸಭೆಯ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಟ್ರಸ್ಟ್ ಜಿಲ್ಲಾಧ್ಯ ರಾಮಣ್ಣ ಇರಕಲ್ಲ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಾದಿಮನಿ ಮಾತನಾಡಿ, ಸಮಾಜ ಬಾಂಧವರು ಒಗ್ಗಟ್ಟಿನಿಂದ ಸಾಧಕರನ್ನು ಗುರುತಿಸಿ ಸನ್ಮಾನಿಸುವುದರೊಂದಿಗೆ ಸಮಾಜದಲ್ಲಿ ಆಗಿ ಹೋದ ಮಹಾನ್ ಚೇತನಗಳ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೊತ್ಸಾಹಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಮೀನುಗಾರರ ಜಿಲ್ಲಾಧ್ಯಕ್ಷ ಗುರಪ್ಪ ತಿರ್ಲಾಪೂರ, ರಾಘವೇಂದ್ರ ಗುಡಿಸಾಗರ, ಬಸವರಾಜ ಗುಡಿಸಾಗರ, ಸಹಕಾರ್ಯದರ್ಶಿ ರವಿಕುಮಾರ ಗುಡಿಸಾಗರ, ಸಂಘಟನಾ ಕಾರ್ಯದರ್ಶಿ ಅಮಿತ ಪೂಜಾರ, ರಾಜು ಪೂಜಾರ, ಪ್ರಕಾಶ ಬಿನ್ನಾಳ, ಆನಂದ ಸುಣಗಾರ, ಮಹಿಳಾ ಅಧ್ಯಕ್ಷರಾದ ಸುಜಾತಾ ಗುಡಿಸಾಗರ, ಗಿರಿಜಾ ಬಾರಕೇರ ಕವಿತಾ ಗುಡಿಸಾಗರ, ಹರೀಶ ಬಾರಕೇರ, ರಾಜು ಪೂಜಾರ, ರಾಜು ಬಾರಕೇರ, ಪ್ರಕಾಶ ಬಾಣದ, ಪ್ರಕಾಶ ನಾಗರಾಳ, ಮಾರುತಿ ಬಾರಕೇರ, ವಿನೋದ ಬಾರಕೇರ ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img