ಬೆಂಗಳೂರು: ಸಿಎಂ ಅವರ ಆಪ್ತ ಕಾರ್ಯದರ್ಶಿ ಅಂತೇಳಿ ವಂಚಿಸುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀಶೈಲ ಜಕ್ಕಣ್ಣನವರ್ ಎಂಬಾತ ಸಿಎಂ ಕಚೇರಿಯಲ್ಲಿ ಏನ್ ಕೆಲಸ ಬೇಕಾದರೂ ಮಾಡಿಕೊಡುವೆ ಎಂದು ವಂಚಿಸುತ್ತಿದ್ದ. ವಿಧಾನಸೌಧ ಪೊಲೀಸರು ಆರೋಪಿ ಶ್ರೀ ಶೈಲ ಜಕ್ಕಣ್ಣನವರ್ ಬಂಧನ ಮಾಡಿದ್ದಾರೆ.
ಜನರನ್ನು ನಂಬಿಸಲೆಂದೇ ಮುಖ್ಯಮಂತ್ರಿಗಳ ಆಪ್ತ ಸಹಾಯಕನೆಂದು ನಕಲಿ ಐಡಿ ಕಾರ್ಡ್ ಮಾಡಿಕೊಂಡು ವಂಚಿಸುತ್ತಿದ್ದ. ವಂಚನೆ ಸಂಬಂಧ ಮುಖ್ಯಮಂತ್ರಿ ಕಚೇರಿಯ ಅಧಿಕಾರಿ ಅರುಣ್ ಪುರಟಾಡು ಎಂಬುವವರು ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿರೋ ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.



