HomePolitics Newsತಪ್ಪು ಮಾಡಿದವರು ಎಷ್ಟೇ ದೊಡ್ಡವರಾಗಿದ್ದರು ಕಾನೂನಿಗೆ ತಲೆಬಾಗಲೇ ಬೇಕು: ಎಸ್‌.ಮುನಿಸ್ವಾಮಿ

ತಪ್ಪು ಮಾಡಿದವರು ಎಷ್ಟೇ ದೊಡ್ಡವರಾಗಿದ್ದರು ಕಾನೂನಿಗೆ ತಲೆಬಾಗಲೇ ಬೇಕು: ಎಸ್‌.ಮುನಿಸ್ವಾಮಿ

For Dai;y Updates Join Our whatsapp Group

Spread the love

ಕೋಲಾರ: ತಪ್ಪು ಮಾಡಿದವರು ಎಷ್ಟೇ ದೊಡ್ಡವರಾಗಿದ್ದರು ಕಾನೂನಿಗೆ ತಲೆಬಾಗಲೇ ಬೇಕು ಎಂದು ಮಾಜಿ ಸಂಸದ ಎಸ್‌.ಮುನಿಸ್ವಾಮಿ ಹೇಳಿದರು. ಕೋಲಾರದಲ್ಲಿ ಮಾತನಾಡಿದ ಅವರು, ತಪ್ಪು ಮಾಡಿದವರು ಎಷ್ಟೇ ದೊಡ್ಡವರಾಗಿದ್ದರು ಕಾನೂನಿಗೆ ತಲೆಬಾಗಲೇ ಬೇಕು ಎಂದರು. ರಾಜ್ಯ ಸರ್ಕಾರದ ಭ್ರಷ್ಟಾಚಾರ ಜಗಜ್ಜಾಹೀರಾಗಿದೆ, ಮೂಡಾ ಮಾತ್ರವಲ್ಲ, ವಾಲ್ಮೀಕಿ ಮತ್ತಿತರ ನಿಗಮಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಸದನದಲ್ಲೇ ಮುಖ್ಯಮಂತ್ರಿಅವ್ಯವಹಾರ ನಡೆದಿರುವುದು 187 ಕೋಟಿ ಅಲ್ಲ 89 ಕೋಟಿ ಎಂದು ಒಪ್ಪಿಕೊಂಡಿದ್ದಾರೆ’ ಎಂದರು.

ವಾಲ್ಮೀಕಿ ನಿಗಮದ ಹಣವನ್ನು ಜ್ಯೂವೆಲರಿ ಶಾಪ್, ಸಾರಾಯಿ ಅಂಗಡಿಗಳಿಗೆ, ನಕಲಿ ಖಾತೆಗಳಿಗೆ, ಹೊರ ರಾಜ್ಯದ ಸೊಸೈಟಿಗಳಿಗೆ ಹಸ್ತಂತರಿಸಿರುವುದು ಈಗಾಗಲೇ ಸಾಬೀತಾಗಿದೆ. ಕಪ್ಪು ಚುಕ್ಕೆ ಇಲ್ಲದ ಆಡಳಿತ ಸಿದ್ದರಾಮಯ್ಯನವರದ್ದು ಅಲ್ಲ ಇಡೀ ಮೈಯಲ್ಲಾ ಕಪ್ಪು ಚುಕ್ಕೆಗಳು ತುಂಬಿವೆ ಎಂಬುದನ್ನು ಈ ಹಗರಣಗಳು ಸಾಬೀತು ಮಾಡಿವೆ. ಈ ಸರ್ಕಾರದಲ್ಲಿ ಎಂಎಲ್‌ಎಗಳು, ಸಚಿವರೂ ಹಗರಣದಲ್ಲಿ ತೊಡಗಿದ್ದಾರೆ, ಓರ್ವ ಮಂತ್ರಿ ಜೈಲಿಗೆ ಹೋಗಿದ್ದಾರೆ, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!