Homecultureಶರಣರ ತತ್ವ ಚಿಂತನ ಪ್ರವಚನ ಕಾರ್ಯಕ್ರಮ ಇಂದಿನಿಂದ

ಶರಣರ ತತ್ವ ಚಿಂತನ ಪ್ರವಚನ ಕಾರ್ಯಕ್ರಮ ಇಂದಿನಿಂದ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಅನ್ನದಾನೀಶ್ವರ ಶಾಖಾ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಗಸ್ಟ್ 22ರಿಂದ ಶರಣರ ತತ್ವ ಚಿಂತನ ಪ್ರವಚನ ಕಾರ್ಯಕ್ರಮ ಪ್ರತಿದಿನ ಸಂಜೆ 8ಕ್ಕೆ ಆರಂಭವಾಗಲಿದೆ.

ಮುಂಡರಗಿ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಪ್ರವಚನಕ್ಕೆ ಚಾಲನೆ ನೀಡಲಿದ್ದಾರೆ. ಶಂಕ್ರಯ್ಯ ಹಿರೇಮಠ ಅಧ್ಯಕ್ಷತೆ ವಹಿಸುವರು. ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಯುವ ಧುರೀಣ ಉಮೇಶಗೌಡ ಪಾಟೀಲ, ಜಿ.ಪಂ ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ನಿವೃತ್ತ ಯೋಧ ದತ್ತಣ್ಣ ಜೋಶಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಅಶೋಕ ಕಣವಿ, ನಿವೃತ್ತ ಪ್ರಾಚಾರ್ಯ ನೀಲಕಂಠ ಮುಕ್ಕಣ್ಣವರ, ಯುವ ಮುಖಂಡ ವೀರಯ್ಯ ಗಂಧದ, ಅಶೋಕ ಕಲ್ಲೂರ, ಮಹಾಲಿಂಗಯ್ಯ ನರಗುಂದಮಠ, ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ ಹಾಗೂ ಗ್ರಾ.ಪಂ ಸದಸ್ಯರು ಪಾಲ್ಗೊಳ್ಳುವರು.

ಗದಗ ನಗರದ ಡಾ. ಗಿರಿಜಾ ಹಸಿಬಿ ಶರಣರ ತತ್ವ ಚಿಂತನವನ್ನು ಪ್ರವಚನ ಮಾಡಲಿದ್ದಾರೆ. ಷಡಕ್ಷರಯ್ಯ ಬದ್ನಿಮಠ, ಬಸನಗೌಡ ಪಾಟೀಲ ಸಂಗೀತ ಸೇವೆ ನೀಡುವರು. ಸೆ.5ರಂದು ಪ್ರವಚನ ಮುಕ್ತಾಯಗೊಳ್ಳಲಿದ್ದು, ಅಂದು ಸಾಮೂಹಿಕ ವಿವಾಹ ನೆರವೇರಲಿದೆ. ವಿವಾಹವಾಗಲಿಚ್ಛಿಸುವವರು ಸೆ.೩ರೊಳಗೆ ಹೆಸರು ನೋದಾಯಿಸಬೇಕು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img