HomeKarnataka Newsಕಾರ್ಕಳ ಯುವತಿ ಅತ್ಯಾಚಾರ ಕೇಸ್ ಗೆ ಟ್ವಿಸ್ಟ್: ಬಿಜೆಪಿ ಕಾರ್ಯಕರ್ತ ಅಂದರ್; ಲವ್ ಜಿಹಾದ್ ಎಂದವರಿಗೆ...

ಕಾರ್ಕಳ ಯುವತಿ ಅತ್ಯಾಚಾರ ಕೇಸ್ ಗೆ ಟ್ವಿಸ್ಟ್: ಬಿಜೆಪಿ ಕಾರ್ಯಕರ್ತ ಅಂದರ್; ಲವ್ ಜಿಹಾದ್ ಎಂದವರಿಗೆ ಮುಖಭಂಗ!

For Dai;y Updates Join Our whatsapp Group

Spread the love

ಉಡುಪಿ:- ಕಾರ್ಕಳ ಯುವತಿ ಅತ್ಯಾಚಾರ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು, ಬಿಜೆಪಿ ಕಾರ್ಯಕರ್ತ ಅಂದರ್ ಮಾಡಲಾಗಿದೆ. ಈ ಮೂಲಕ ಲವ್ ಜಿಹಾದ್ ಎನ್ನುತ್ತಿದ್ದ ಕಮಲ ನಾಯಕರಿಗೆ ಭಾರೀ ಮುಖಭಂಗವಾಗಿದೆ.

ಅಭಯ್ ಬಂಧಿತ ಆರೋಪಿ. ಅಭಯ್ ಬಿಜೆಪಿ ಕಾರ್ಯಕರ್ತ ಎನ್ನುವ ಮಾಹಿತಿ ಸಿಕ್ಕಿದೆ. ಉಡುಪಿ ಅತ್ಯಾಚಾರ ಕೇಸನ್ನು ಲವ್ ಜಿಹಾದ್​​ ಎಂದು ಆರೋಪಿಸಿದ್ದ ಬಿಜೆಪಿ, ಹಿಂದೂ ಸಂಘಟನೆಗಳಿಗೆ ಅಭಯ್ ಬಂಧನ ಮುಖ ಭಂಗ ತಂದಿದೆ.

ಅಲ್ಲದೆ ಅಭಯ್ ಅತ್ಯಾಚಾರಿ ಅಲ್ತಾಫ್​ಗೆ ಡ್ರಗ್ಸ್ ತಂದು ಕೊಟ್ಟಿದ್ದ ಎಂದು ತಿಳಿದುಬಂದಿದೆ. ಜಿಲ್ಲೆಯ ಕಾರ್ಕಳದಲ್ಲಿ ಡ್ರಗ್ಸ್ ಬೆರೆಸಿದ ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದ್ದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದೀಗ 3ನೇ ಆರೋಪಿ ಅಭಯ್​ನನ್ನು ಪೊಲೀಸರು ಬಂಧಿಸಿದ್ದು ಹೊಸ ಟ್ವಿಸ್ಟ್ ಸಿಕ್ಕಿದೆ.

ಬಂಧಿತ ಆರೋಪಿ ಅಭಯ್ ಫೇಸ್​​ಬುಕ್​ನಲ್ಲಿ MLA ಸುನೀಲ್​​ಕುಮಾರ್​​ ಫೋಟೋ ಹಾಕಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಬಿಜೆಪಿ, ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದಾನೆ.

ಇತ್ತೀಚೆಗೆ ಈ ಪ್ರಕರಣಕ್ಕೆ ಬಿಜೆಪಿ, ಹಿಂದೂ ಸಂಘಟನೆಗಳು ಲವ್ ಜಿಹಾದ್ ಹಣೆಪಟ್ಟಿ ಕಟ್ಟಿದ್ದರು. ಆದರೆ ಇದೀಗ ತಮ್ಮದೇ ಕಾರ್ಯಕರ್ತ ಈ ಪ್ರಕರಣದಲ್ಲಿ ಭಾಗಿಯಾಗಿರೋದು ಮುಖಭಂಗವಾಗಿದೆ. ಆರೋಪಿ ಅಭಯ್, ಪ್ರಮುಖ ಆರೋಪಿ ಅಲ್ತಾಫ್​ ಜೊತೆ ಆತ್ಮೀಯವಾಗಿದ್ದ. ಅತ್ಯಾಚಾರ ನಡೆದ ದಿನ ಅಲ್ತಾಫ್​ಗೆ ಡ್ರಗ್ಸ್​ ಒದಗಿಸಿದ್ದ. ಸದ್ಯ ಈಗ ಅಭಯ್ ಬಂಧನ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!