Homehubballiಜೀವಧ್ವನಿ ಸಂಸ್ಥೆಯಿಂದ ಮಾನವೀಯ ಕಾರ್ಯ

ಜೀವಧ್ವನಿ ಸಂಸ್ಥೆಯಿಂದ ಮಾನವೀಯ ಕಾರ್ಯ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಜೀವಧ್ವನಿ ಸಂಸ್ಥೆಯ ನಿಖಿಲ್ ಹಂಜಗಿ ನೇತೃತ್ವದಲ್ಲಿ ಬೀದಿ ಪ್ರಾಣಿಗಳ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸುತ್ತಿದ್ದು, ಹಸುಗಳು ಮತ್ತು ನಾಯಿಗಳಿಗೆ ಸುರಕ್ಷತೆಯನ್ನು ಒದಗಿಸಲು ಆದ್ಯತೆ ನೀಡುತ್ತಿದೆ.

ರಾತ್ರಿ ವೇಳೆ ವಾಹನಗಳ ಜೊತೆ ಘರ್ಷಣೆಗೊಳಗಾಗುವ ಅಪಾಯ ಬೀದಿ ಪ್ರಾಣಿಗಳಿಗೆ ಹೆಚ್ಚಾಗಿರುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು, ಜೀವಧ್ವನಿ ಸಂಸ್ಥೆ ಹಸುಗಳು ಮತ್ತು ನಾಯಿಗಳ ಕುತ್ತಿಗೆಗೆ ಪ್ರತಿಫಲಕ ಬೆಲ್ಟ್ ಗಳನ್ನು (Reflective Belts) ಅಳವಡಿಸುತ್ತಿದ್ದು, ಇದರಿಂದ, ವಾಹನ ಚಾಲಕರು ದೂರದಿಂದಲೇ ಈ ಪ್ರಾಣಿಗಳನ್ನು ಗಮನಿಸಲು ಸಾಧ್ಯವಾಗುತ್ತದೆ ಮತ್ತು ಅಪಘಾತಗಳ ಸಂಭವ ಕಡಿಮೆಗೊಳ್ಳುತ್ತದೆ.

ಜೀವಧ್ವನಿ ಕಾರ್ಯಕರ್ತರಾದ ಮಧುಮತಿ ಹೆಮಕರ್, ವಿಶ್ವನಾಥ್ ಶಿವಶೆಟ್ಟರ್, ಪರೋಕ್ಷ ಹೂಲಿ, ರಾಘವೇಂದ್ರ, ಅವಿನಾಶ್ ಬೀದಿ ಪ್ರಾಣಿಗಳಿಗೆ ಆರೋಗ್ಯ, ಆಹಾರ, ಮತ್ತು ಆಶ್ರಯವನ್ನು ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img