HomeGadag Newsವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ: ತಪ್ಪಿದ ಅನಾಹುತ, ಎದೆ ಝಲ್ ಎನಿಸುವ ದೃಶ್ಯ !

ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ: ತಪ್ಪಿದ ಅನಾಹುತ, ಎದೆ ಝಲ್ ಎನಿಸುವ ದೃಶ್ಯ !

For Dai;y Updates Join Our whatsapp Group

ಗದಗ:- ಗದಗನ ಬೆಟಗೇರಿ ಮಾರ್ಕಂಡೇಶ್ವರ ದೇವಸ್ಥಾನದ ಹತ್ತಿರ ರಸ್ತೆ ಪಕ್ಕದಲ್ಲಿ ಹೊರಟ್ಟಿದ್ದ ವಿದ್ಯಾರ್ಥಿನಿಯರ ಮೇಲೆ ಹೊಂಚು ಹಾಕಿ ಗೂಳಿ ದಾಳಿ ಮಾಡಿದ ಘಟನೆ ಜರುಗಿದೆ.

ಗೂಳಿ ದಾಳಿಗೆ ವಿದ್ಯಾರ್ಥಿನಿ ನೆಲಕಚ್ವಿದ್ದು, ಗೂಳಿ ದಾಳಿ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಳಿಕ ನಡುರಸ್ತೆಯಲ್ಲೇ ಎರಡು ಗೂಳಿಗಳ ಭೀಕರ ಕಾಳಗ ನಡೆದಿದ್ದು, ಜನರು ದಿಕ್ಕಾಪಾಲಾಗಿ ಓಡಿದ್ದಾರೆ.

ಗೂಳಿಗಳ ಅಟ್ಟಹಾಸಕ್ಕೆ ಗದಗ-ಬೆಟಗೇರಿ ಅವಳಿ ನಗರದ ಜನರು ಕಂಗಾಲಾಗಿದ್ದಾರೆ. ಗೂಳಿ ದಾಳಿಗೆ ಕಳೆದ ತಿಂಗಳು ಓರ್ವ ವೃದ್ಧ ಮೃತ ಪಟ್ಟಿದ್ದ. ಆದರೂ ತಲೆಕೆಡಿಸಿಕೊಳ್ಳದ ನಗರಸಭೆ ಆಡಳಿತ, ಕಾಟಾಚಾರಕ್ಕೆ ನಾಲ್ಕಾರು ಬೀದಿ ದನಗಳ ಸಾಗಾಟ ಮಾಡಿ ಗಪ್ ಚುಪ್ ಆಗಿದೆ. ಇನ್ನು ನೂರಾರು ಬಿಡಾಡಿ ದನಗಳು ಅವಳಿ ನಗರದ ನಡು ರಸ್ತೆಯಲ್ಲಿ ಓಡಾಟ ನಡೆಸುತ್ತಿವೆ.

ಸಾರ್ವಜನಿಕರು ಈ ಬಗ್ಗೆ ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img