HomeGadag Newsಲಕ್ಷ್ಮೇಶ್ವರ ಬಂದ್‌ಗೆ ಸಹಕರಿಸಿದ ಅಂಗಡಿ ಮಾಲೀಕರಿಗೆ ಗುಲಾಬಿ ಹೂ

ಲಕ್ಷ್ಮೇಶ್ವರ ಬಂದ್‌ಗೆ ಸಹಕರಿಸಿದ ಅಂಗಡಿ ಮಾಲೀಕರಿಗೆ ಗುಲಾಬಿ ಹೂ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀರಾಮ ಸೇನಾ ವತಿಯಿಂದ ಶನಿವಾರ ಕರೆ ನೀಡಿದ್ದ ಲಕ್ಷ್ಮೇಶ್ವರ ಬಂದ್‌ಗೆ ಸಹಕರಿಸಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ ವರ್ತಕರಿಗೆ ಶ್ರೀರಾಮ ಸೇನಾ ಹಾಗೂ ಗೋಸಾವಿ ಸಮಾಜ ಬಾಂಧವರು ಗುಲಾಬಿ ಹೂ ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದರು.

ಲಕ್ಷ್ಮೇಶ್ವರದ ಮುಖ್ಯ ಮಾರುಕಟ್ಟೆಯಲ್ಲಿನ ಪ್ರತಿ ಅಂಗಡಿಗೆ ತೆರಳಿದ ಶ್ರೀರಾಮ ಸೇನಾ ಕಾರ್ಯಕರ್ತರು ಬಂದ್‌ಗೆ ಸಹಕರಿಸಿದ ವರ್ತಕರಿಗೆ, ಕೈಗಾಡಿ ಅಂಗಡಿಗಳ ಮಾಲಿಕರಿಗೆ, ಹೊಟೇಲ್ ಮಾಲಿಕರಿಗೆ, ವಿವಿಧ ಬಡಾವಣೆಗಳಲ್ಲಿನ ಅಂಗಡಿಗಳ ಮಾಲಿಕರಿಗೆ ಗುಲಾಬಿ ಹೂಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನಾ ತಾಲೂಕಾ ಅಧ್ಯಕ್ಷ ಈರಣ್ಣ ಪೂಜಾರಿ, ನ್ಯಾಯ ಕೇಳಲು ಪೊಲೀಸ್ ಠಾಣೆಗೆ ಆಗಮಿಸಿದ ವ್ಯಕ್ತಿಗಳ ಮೇಲೆಯೇ ಪೊಲೀಸ್ ಅಧಿಕಾರಿ ಲಾಠಿಯಿಂದ ಹೊಡೆದಿರುವದು ಪ್ರಜಾಪ್ರಭುತ್ವದ ಅಣಕವಾಗಿದೆಯೆಂದು ವಿಷಾದಿಸಿದರು.

ಈ ಸಂದರ್ಭದಲ್ಲಿ ಮುತ್ತು ಕರ್ಜಿಕಣ್ಣವರ, ಬಸವರಾಜ ಚಕ್ರಸಾಲಿ, ಪ್ರಾಣೇಶ್ ವ್ಯಾಪಾರಿ, ಪ್ರಕಾಶ್ ಕಾಮಡೊಳ್ಳಿ, ಪ್ರವೀಣ್ ಬಣ್ಣಣಿಕೊಪ್ಪ, ಮಲ್ಲಿಕಾರ್ಜುನ ಹಲ್ದೊಟದ, ಅಕ್ಷಯ್ ಕುಮಾರ್, ಪವನ್ ಹಗರದ್, ಹನುಮಂತ ರಾಮಗೇರಿ, ಅಮಿತ್ ಗುಡಗೇರಿ, ಯಶವಂತ ಭಜಂತ್ರಿ, ಸುನಿಲ್ ಗೋಸಾವಿ, ಗೋವಿಂದ್ ಗೋಸಾವಿ, ರಾಘವೇಂದ್ರ ಗೋಸಾವಿ, ವಿಕ್ರಂ ಗೋಸಾವಿ, ಮಾದೇಶ್ ಗೋಸಾವಿ, ಕಿಶನ್ ಗೋಸಾವಿ, ಆಕಾಶ್ ಗೋಸಾವಿ, ನಿಖಿಲ್ ಗೋಸಾವಿ, ಹರೀಶ್ ಗೋಸಾವಿ, ರಾಜು ಗೋಸಾವಿ, ಪ್ರವೀಣ್ ಗುಡಿಗೇರಿ, ಮಹೇಶ್ ಮುಳುಗುಂದ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img