ರಾಯಚೂರು:- ನಾಲ್ವರಿದ್ದ ಬೈಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ನಗರದ ಹೊರವಲಯದ ಪವರ್ ಗ್ರಿಡ್ ಬಳಿ ಜರುಗಿದೆ.
28 ವರ್ಷದ ಶರಣಬಸವ, 26 ವರ್ಷದ ಶಿವು ಮೃತರು. ಇರ್ಫಾನ್ ಹಾಗೂ ಗರೀಬ್ ಎಂಬುವವರಿಗೆ ಗಂಭೀರ ಗಾಯಗಳಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಯಚೂರಿನಿಂದ ಕಲ್ಲೂರಿಗೆ ಕಟ್ಟಡ ಕೆಲಸಕ್ಕಾಗಿ ನಿತ್ಯವು ಪ್ರಯಾಣಿಸುತ್ತಿದ್ದರು. ಒಂದೇ ಬೈಕನಲ್ಲಿ ನಾಲ್ವರು ಹೊರಟಿದ್ದಾಗ ಪವರ್ ಗ್ರಿಡ್ ಬಳಿ ಬೈಕ್ಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಕಾರು ಸಹಿತ ಚಾಲಕ ಪರಾರಿಯಾಗಿದ್ದಾನೆ.
ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



