HomeBengaluru Newsವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ!

ವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ!

For Dai;y Updates Join Our whatsapp Group

Spread the love

ಬೆಂಗಳೂರು:- ವೈಟ್​ ಟಾಪಿಂಗ್​ ಕಾಮಗಾರಿ ಹಿನ್ನೆಲೆ ಬೆಂಗಳೂರಿನ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಸಂಚಾರಿ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.

BBMP ವತಿಯಿಂದ ನಗರದ ಹಲವು ರಸ್ತೆಗಳಿಗೆ ವೈಟ್​ ಟಾಪಿಂಗ್​ ಕಾಮಗಾರಿ ನಡೆಯುತ್ತಿದ್ದು, ಸಂಚಾರ ನಿರ್ಬಂಧಿಸಲಾಗಿದೆ. ವಿದ್ಯಾನಗರ ಕ್ರಾಸ್​ನಿಂದ ಬೆಲಕಾಂ ಲೇಔಟ್ ರಸ್ತೆ, ದೇವರಬೀಸನಹಳ್ಳಿ ಸಕ್ರಾ ಆಸ್ಪತ್ರೆ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ವಿದ್ಯಾನಗರ ಕ್ರಾಸ್‌ನ ವಿಎನ್​ಎಸ್​ಐಟಿ ಕಾಲೇಜು ಕಡೆಗೆ ಹೋಗುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನವೆಂಬರ್​ 14ರವರೆಗೆ ವಿದ್ಯಾನಗರ ಕ್ರಾಸ್ ನಿಂದ ಬೆಲಕಾಂ ಲೇಔಟ್ ವರೆಗೆ ಸಂಚಾರವನ್ನು ನಿರ್ಭಂದಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಪರ್ಯಾಯ ಮಾರ್ಗಗಳು:-

ವಿದ್ಯಾನಗರ ಕಡೆಯಿಂದ ಉತ್ತನಹಳ್ಳಿಗೆ ಹೋಗುವ ವಾಹನಗಳು ಬಿ.ಎಂ.ಡಬ್ಲ್ಯೂ ಕಾರ್ ಶೋರೂಂ -ಶಕ್ತಿ ನಗರ- ಆಕ್ಸ್‌ಫರ್ಡ್ ಸ್ಕೂಲ್ – ಅಲ್ಲಮಾರನಹಳ್ಳಿ- ಬೆಲಿಕಾಂ ಲೇಔಟ್ ಮೂಲಕ ಉತ್ತನಹಳ್ಳಿ ಮುಖ್ಯ ರಸ್ತೆ ತಲುಪಬಹುದಾಗಿದೆ ಅಥವಾ ಚಿಕ್ಕಜಾಲ ಅಂಡರ್ ಪಾಸ್ ಮೂನ್ ಗೇಟ್ ರಸ್ತೆ- ಮಾರನಾಯಕನಹಳ್ಳಿ-ಉತ್ತನಹಳ್ಳಿ ಮುಖ್ಯರಸ್ತೆ ಮೂಲಕ ಹೋಗಬಹುದು.

ಉತ್ತನಹಳ್ಳಿ ಮುಖ್ಯ ರಸ್ತೆ ಕಡೆಯಿಂದ ವಿದ್ಯಾನಗರಕ್ರಾಸ್ ಕಡೆಗೆ ಹೋಗುವ ವಾಹನಗಳು ಹೊಸಹಳ್ಳಿ-ಹುಣಸಮಾರನಹಳ್ಳಿ ಅಂಡರ್ ಪಾಸ್-ಸರ್ವಿಸ್ ರೋಡ್ ಮೂಲಕ ತಲುಪಬಹುದು.

ವಿದ್ಯಾನಗರ ಕಡೆಯಿಂದ ಬಾಗಲೂರು ಇಂಡಸ್ಟ್ರೀಯಲ್ ಏರಿಯಾ ಕಡೆಗೆ ಹೋಗುವ ವಾಹನಗಳು ಚಿಕ್ಕಜಾಲ ಅಂಡರ್ಪಾಸ್, ಕೋಟೆ ಕ್ರಾಸ್, ದೊಡ್ಡ ಜಾಲ ಮೂಲಕ ಹೋಗಬಹುದು.

ಬಸ್ಸುಗಳು ಹಾಗೂ ಭಾರಿ ಸರಕು ಸಾಗಣೆ ವಾಹನಗಳು ಬಾಗಲೂರು ಕ್ರಾಸ್ ರೇವಾ ಜಂಕ್ಷನ್-ಸಾತನೂರು-ಬಾಗಲೂರು ರಸ್ತೆ ಮಾರ್ಗವನ್ನು ಕಡ್ಡಾಯವಾಗಿ ಉಪಯೋಗಿಸತಕ್ಕದ್ದು.

ದೇವರಬೀಸನಹಳ್ಳಿ ಸಕ್ತಾ ಆಸ್ಪತ್ರೆ ಮುಖ್ಯರಸ್ತೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಯಮಲೂರು ಕಡೆಯಿಂದ ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಗೆ ಸಂಚರಿಸುವವರು ಹಳೆ ವಿಮಾನ ನಿಲ್ದಾಣ ರಸ್ತೆ ಯಮಲೂರು ಜಂಕ್ಷನ್ ಮಾರತ್ತಹಳ್ಳಿ ಬ್ರಿಡ್ಜ್ – ಕಾಡುಬೀಸನಹಳ್ಳಿ ಬ್ರಿಡ್ಜ್ – ಹೊರವರ್ತುಲ ರಸ್ತೆ ಮಾರ್ಗವಾಗಿ ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಗೆ ಸಂಚರಿಸಬಹುದು.

ಯಮಲೂರು ಕಡೆಯಿಂದ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಸಂಚರಿಸುವವರು ಹಳಿ ವಿಮಾನ ನಿಲ್ದಾಣ ರಸ್ತೆ ಮಾರ್ಗವಾಗಿ ಯಮಲೂರು ಜಂಕ್ಷನ್ ಯಮಲೂರು ವಿಲೇಜ್ ಮಾರ್ಗವಾಗಿ ಯಮಲೂರು ಕೋಡಿಯಲ್ಲಿ ಎಡ ತಿರುವು ಪಡೆದು ಕರಿಯಮ್ಮನ ಅಗ್ರಹಾರ ಮೂಲಕ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಸಂಚರಿಸಬಹುದು.

ಯಮಲೂರು ಕಡೆಯಿಂದ ಹೊರವರ್ತುಲ ರಸ್ತೆ ಕಡೆಗೆ ಸಂಚರಿಸುವವರು ಹಳೆ ವಿಮಾನ ನಿಲ್ದಾಣ ರಸ್ತೆ, ಯಮಲೂರು ಜಂಕ್ಷನ್ ಯಮಲೂರು ವಿಲೇಜ್ ಮೂಲಕ ಯಮಲೂರು ಕೋಡಿ ಬೆಳ್ಳಂದೂರು ಕೋಡಿ ಬಲ ತಿರುವು ಪಡೆದು ಬೆಳ್ಳಂದೂರು ವಿಲೇಜ್ ಮಾರ್ಗವಾಗಿ ಹೊರವರ್ತುಲ ರಸ್ತೆ ಕಡೆಗೆ ಸಂಚರಿಸಬಹುದು.

ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಯಿಂದ ನಗರದ ಕಡೆಗೆ ಸಂಚರಿಸುವವರು ಹೊರವರ್ತುಲ ರಸ್ತೆ ಕಾಡುಬೀಸನಹಳ್ಳಿ ಬ್ರಿಡ್ಜ್ ಮಾರತ್ತಹಳ್ಳಿ ಬ್ರಿಡ್ಜ್ ಮೇಲೆ ಎಡ ತಿರುವು ಪಡೆದು ಯಮಲೂರು ಜಂಕ್ಷನ್ ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ನಗರದ ಕಡೆಗೆ ಸಂಚರಿಸಬಹುದು.

ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಯಿಂದ ನಗರದ ಆಗ್ರಹಾರ – ಯಮಲೂರು ಕೋಡಿಯಲ್ಲಿ ಬಲ ತಿರುವು ಪಡೆದು ಸಂಚರಿಸಬಹುದು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!