ಮಂಗಳೂರು: ಯೋಗೇಶ್ವರ್ 18 ರಿಂದ 20 ಸಾವಿರ ಮತದಿಂದ ಗೆಲ್ಲುತ್ತಾರೆ ಬರೆದಿಟ್ಟುಕೊಳ್ಳಿ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು, ಜಮೀರ್ ಬಂದಿದ್ದು ಪ್ಲಸ್ ಆಗಿದೆ ಸ್ವಲ್ಪ. ಹೇಳಿಕೆಯಿಂದ ಅನಾನುಕೂಲ ಆಗಿದೆ ಅಂತ ಯೋಗಿಶ್ವರ್ ಹೇಳಿದ್ದಾರೆ.
ಬರೆದಿಟ್ಟುಕೊಳ್ಳಿ, ಚನ್ನಪಟ್ಟಣದಲ್ಲಿ ಏನೇನು ಆಗುವುದಿಲ್ಲ. ಚನ್ನಪಟ್ಟಣದಲ್ಲಿ ಮೂರು ದಿನ ಪ್ರಚಾರ ಮಾಡಿದ್ದೇನೆ. ಯೋಗೇಶ್ವರ್ 18 ರಿಂದ 20 ಸಾವಿರ ಮತದಿಂದ ಗೆಲ್ಲುತ್ತಾರೆ ಬರೆದಿಟ್ಟುಕೊಳ್ಳಿ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಲೋಕಾಯುಕ್ತ ನೋಟಿಸ್ ಬಗ್ಗೆ ಮಾತನಾಡಿ, ನೋಟಿಸ್ ಬಂದದ್ದು ನನಗೆ ಗೊತ್ತಿಲ್ಲ. ನೋಟಿಸ್ ಕೊಡೋದು ರೊಟೀನ್. ಇ.ಡಿಯವರು ಎಸಿಬಿಗೆ ಫಾರ್ವಡ್ ಮಾಡಿದ್ದಾರೆ. ಅಲ್ಲಿಂದ ಲೋಕಯುಕ್ತಗೆ ಕೇಸ್ ಬಂದಿದೆ. ನೋಟಿಸ್ ಬಂದ ಮೇಲೆ ಹೋಗಲೇಬೇಕು ಎಂದು ಸ್ಪಷ್ಟಪಡಿಸಿದರು.



