ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಪುರಸಭೆ ಪದವಿ ಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಎನ್ಸಿಸಿ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ ನೆರವೇರಿತು. ಸುಮಾರು ೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಎನ್ಸಿಸಿ 38 ಕರ್ನಾಟಕ ಬಟಾಲಿಯನ್ ಕರ್ನಲ್ ರೂಪೇಂದ್ರ ಸಿಂಗ್ ಮಾತನಾಡಿ, ರಾಷ್ಟಿçÃಯ ಕೆಡೆಟ್ ಕಾರ್ಪ್ಸ್ (ಎನ್ ಸಿಸಿ ) ನಮ್ಮ ದೇಶದ ಉತ್ತಮ ನಾಗರಿಕರು ಮತ್ತು ಭವಿಷ್ಯದ ನಾಯಕರಾಗಲು ಯುವ ಯುವಕ-ಯುವತಿಯರಿಗೆ ತರಬೇತಿ ನೀಡಲು ಎನ್ಸಿಸಿ ರಾಷ್ಟಿçÃಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ. ದೇಶದ ಯುವಕರಲ್ಲಿ ಚಾರಿತ್ರ್ಯ, ಒಡನಾಟ, ಶಿಸ್ತು, ನಾಯಕತ್ವ, ಜಾತ್ಯತೀತ ದೃಷ್ಟಿಕೋನ, ಸಾಹಸ ಮನೋಭಾವ ಮತ್ತು ನಿಸ್ವಾರ್ಥ ಸೇವೆಯ ಆದರ್ಶಗಳನ್ನು ಬೆಳೆಸುವುದು ಮುಖ್ಯ ಉದ್ದೇಶವಾಗಿದೆ. ಎನ್ಸಿಸಿ ಮುಗಿದ ನಂತರ ಪ್ರತಿಯೊಬ್ಬರೂ ಸೇನೆಯನ್ನು ಸೇರಬೇಕು ಎಂದು ಆಶಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಬೇದಾರ ಮೇಜರ್ ಮಲ್ಲಪ್ಪ ಎನ್ಸಿಸಿ ನಡೆದು ಬಂದ ದಾರಿ ಮತ್ತು ಇದರಿಂದ ಜೀವನದಲ್ಲಿ ಆಗುವ ಬದಲಾವಣೆ ಕುರಿತು ವಿವರಿಸಿದರು. ಎನ್ಸಿಸಿ ದಿನಾಚರಣೆಯ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರ್ಗಣ್ಣವರ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯ ಬಿ.ಎಸ್. ಉಗ್ರದ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಪ.ಪೂ ಕಾಲೇಜು ಪ್ರಾಚಾರ್ಯ ಎ.ವಾಯ್. ಕಳ್ಳಿಮನಿ, ಹವಾಲ್ದಾರ ಶ್ರೀಕಾಂತ ಎಚ್, ಡಾ. ಮಲ್ಲಿಕಾರ್ಜುನ, ವಿ.ಎನ್. ನಾಗಶೆಟ್ಟಿ, ಎಸ್.ಬಿ. ಪಾಟೀಲ, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಇದ್ದರು. ಅನುಸೂಯಾ ಲಮಾಣಿ ಸ್ವಾಗತಿಸಿ ನಿರೂಪಿಸಿದರು.



