ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಸವಣೂರ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಡಿ.7ರಂದು ಕಾರ್ತಿಕೋತ್ಸವದ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಬೆಳಿಗ್ಗೆ 7ರಿಂದ ವೆಂಕಟೇಶ್ವರ ಸ್ವಾಮಿ ಮತ್ತು ಮೈಲಾರಲಿಂಗೇಶ್ವರ ದೇವರಿಗೆ ಅಭಿಷೇಕ, ಅಲಂಕಾರ ಪೂಜೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಗೊರವಯ್ಯರಿಂದ ಭಂಡಾರ ಸೇವಾಕಾರ್ಯ, ಸಂಜೆ 4ಕ್ಕೆ ಸಂಗೀತ-ನೃತ್ಯ ಸೇವೆ, ಸಂಜೆ 6ಕ್ಕೆ ಪಲ್ಲಕ್ಕಿ ಸೇವೆ ಮತ್ತು ಕಾರ್ತಿಕೋತ್ಸವ ನೆರವೇರಲಿದೆ. 7ಕ್ಕೆ ಮಹಾಮಂಗಳಾರತಿ ಬಳಿಕ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.



