HomeGadag Newsಭುವನ ಗದ್ದಿಗೆ `ಯುವ ಕ್ರೀಡಾಸಿರಿ' ಪ್ರಶಸ್ತಿ

ಭುವನ ಗದ್ದಿಗೆ `ಯುವ ಕ್ರೀಡಾಸಿರಿ’ ಪ್ರಶಸ್ತಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಪ್ರತಿಭಾವಂತ ಬಾಲಕ ಭುವನ ಗದ್ದಿ ಯುವ ಕ್ರೀಡಾಸಿರಿ ಪ್ರಶಸ್ತಿಗೆ ಪಾತ್ರನಾಗಿದ್ದು, ಶನಿವಾರ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಬಿಸನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಶಿ ಜಂಗಮವಾಡಿ ಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಟೇಕ್ವಾಂಡೋ (ಕರಾಟೆ) ಕ್ರೀಡಾಪಟು ಭುವನ್  ಗದ್ದಿ ಇವರಿಗೆ `ಯುವ ಕ್ರೀಡಾಸಿರಿ’ ಪ್ರಶಸ್ತಿ ನೀಡಿ ಗೌರವಿಸಿದರು.

ಸಾಧಕ ಬಾಲಕನಿಗೆ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆ ಪಾಠಶಾಲೆ ಕಾಶಿ ಜಂಗಮವಾಡಿ ಖಾಸಾ ಶಾಖಾ ಮಠ, ಬಿಸನಳ್ಳಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಇಷ್ಟಲಿಂಗ ಮಹಾಪೂಜೆ ಹಾಗೂ `ವೀರಶೈವ ಅಷ್ಟಾವರಣ ವಿಜ್ಞಾನ’ ಆಶೀರ್ವಚನ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಭುವನ ಗದ್ದಿಯ ಸಾಧನೆಗೆ ತರಬೇತಿ ನೀಡಿದ ತರಬೇತುದಾರ ರವಿ ಮಾಸ್ಟರ್ ಹಾಗೂ ಲಕ್ಷೆö್ಮÃಶ್ವರ  ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!