Homehubballiಮಹಿಳಾ ಮುಖ್ಯ ಶಿಕ್ಷಕರಿಗೆ ಕಾನೂನಾತ್ಮಕ ರಕ್ಷಣೆ ಒದಗಿಸುವಲ್ಲಿ ಅಧಿಕಾರಿಗಳು ವಿಫಲ

ಮಹಿಳಾ ಮುಖ್ಯ ಶಿಕ್ಷಕರಿಗೆ ಕಾನೂನಾತ್ಮಕ ರಕ್ಷಣೆ ಒದಗಿಸುವಲ್ಲಿ ಅಧಿಕಾರಿಗಳು ವಿಫಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಸರಕಾರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಮುಖ್ಯ ಶಿಕ್ಷಕರಿಗೆ ಸೂಕ್ತ ಕಾನೂನಾತ್ಮಕ, ಸಂವಿಧಾನಾತ್ಮಕ ರಕ್ಷಣೆ ಒದಗಿಸುವ ವಿಷಯದಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿರುವುದು ವಿಷಾದನೀಯ ಎಂದು ಸಭಾಪತಿ ಬಸವರಾಜ ಹೊರಟ್ಟಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಕಟ್ಟುನಿಟ್ಟಿನ ಕ್ರಮಕೈಗೊಳ್ಳವಂತೆ ಒತ್ತಾಯಿಸಿದ್ದಾರೆ.

ಸರಕಾರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಮುಖ್ಯ ಶಿಕ್ಷಕರುಗಳಿಗೆ 2024-25ನೇ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ಅಹಿತಕರ ಘಟನೆಗಳ ಪ್ರಕರಣಗಳು ಹೆಚ್ಚಾಗಿವೆ ಎಂದು ಈ ಬಗ್ಗೆ ರಾಜ್ಯ ಮಹಿಳಾ ಮುಖ್ಯ ಶಿಕ್ಷಕರ ಒಕ್ಕೂಟದಿಂದ ರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿಯಂತ್ರಣ ದಳದಿಂದ ಹಾಗೂ ಸಮೂಹ ಮಾಧ್ಯಮಗಳಿಂದ ವರದಿಗಳು ಸ್ವೀಕೃತಗೊಂಡಿರುತ್ತವೆ. ಸದರಿ ಪ್ರಕರಣಗಳ ಬಗ್ಗೆ ಮಹಿಳಾ ಮುಖ್ಯಶಿಕ್ಷಕರಿಗೆ ಸೂಕ್ತ ಕಾನೂನಾತ್ಮಕ ಸಂವಿಧಾನಾತ್ಮಕ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರಿಗೆ ಸೂಕ್ತ ರಕ್ಷಣೆ ಮತ್ತು ಸೇವಾ ಭದ್ರತೆಯನ್ನು ಒದಗಿಸುವಂತೆ ಮುಖ್ಯ ಕಾರ್ಯದರ್ಶಿಗಳು, ರಾಷ್ಟ್ರೀಯ ಶಿಕ್ಷಣ ಆಡಳಿತ ಸುಧಾರಣೆ ಮತ್ತು ತನಿಖಾ ಪ್ರಾದೇಶಿಕ ದಳ ಬೆಂಗಳೂರು ಇವರು ಆಯುಕ್ತರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಇವರಿಗೆ ಪತ್ರ ಬರೆದಿದ್ದಾರೆ. ಅವರು ಬರೆದ ಪತ್ರದ ಸಾರಾಂಶ ನೋಡಿದಾಗ ಅತ್ಯಂತ ಕಳವಳ ಎನಿಸುತ್ತದೆ.

ಶಾಲಾ ಮುಖ್ಯಸ್ಥರು ಇಲಾಖಾ ಆದೇಶದಂತೆ ಸಭೆಯ ತರಬೇತಿ ಇತರೆ ಕೆಲಸಗಳಲ್ಲಿ ತೆರಳಿದಾಗ ಹತ್ತು ವರ್ಷ ಅನುಭವವಿರುವ, ನಂಬಿಕೆಗೆ ಅರ್ಹವಿರುವ ಶಾಲಾ ಶೈಕ್ಷಣಿಕ ಆಡಳಿತ ಚಟುವಟಿಕೆಗಳನ್ನು ನಿರ್ವಹಿಸಲು ಅರ್ಹರಿರುವ ಯಾವುದೇ ಸಹ ಶಿಕ್ಷಕರಿಗೆ ಪ್ರಭಾರ ನೀಡುವಂತೆ ಮಾಡುವುದು ತುರ್ತು ಅಗತ್ಯವಿದೆ.

ಇಂತಹ ಅಹಿತಕರ ಘಟನೆಗಳು ರಾಜ್ಯದ, ದೇಶದ ಸಂವಿಧಾನದ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ. ಇನ್ನುಮುಂದೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದAತೆ ಮುಖ್ಯ ಶಿಕ್ಷಕರಿಗೆ ಸೂಕ್ತ ರಕ್ಷಣೆ ಮತ್ತು ಸೇವಾ ಭದ್ರತೆಯನ್ನು ಒದಗಿಸುವಂತೆ ಸಭಾಪತಿ ಬಸವರಾಜ ಹೊರಟ್ಟಿಯವರು ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.

ಅಲ್ಲದೇ ಕೆಲವು ಶಾಲೆಗಳಲ್ಲಿ ಕೆಲವು ಸಹ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಮುಖ್ಯ ಶಿಕ್ಷಕರ ಸರ್ಕಾರಿ ಆದೇಶ ಪಾಲನೆ ಮಾಡುತ್ತಿಲ್ಲ. ಗ್ರಾಮದ ತಾಲೂಕಿನ ಕೆಲವು ಕಿಡಿಗೇಡಿ ವ್ಯಕ್ತಿಗಳ ಸಂಪರ್ಕದಿAದ ಮುಖ್ಯ ಶಿಕ್ಷಕರಿಗೆ ಸುಳ್ಳು ಮೂಕರ್ಜಿಗಳನ್ನು ಉನ್ನತ ಅಧಿಕಾರಿಗಳ ಕಛೇರಿಗೆ ಬರೆದು ಮುಖ್ಯ ಶಿಕ್ಷಕರ ಘನತೆ ಗೌರವಕ್ಕೆ ಧಕ್ಕೆ ತರುವುದು, ಮಾನಸಿಕ ಕಿರುಕುಳ ನೀಡುವುದು, ಕೊಲೆ ಬೆದರಿಕೆ ಹಾಕುವುದು ಕಂಡುಬAದಿದೆ ಎಂದು ಬಸವರಾಜ ಹೊರಟ್ಟಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!