ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶರಣ ಬಸವೇಶ್ವರ ಬಡಾವಣೆಯಲ್ಲಿರುವ ಅಂಬಿಗರ ಚೌಡಯ್ಯ ಅನುಭಾವ ಪೀಠದಲ್ಲಿ ಗಣಾಚಾರದ ಶರಣೆ ನಿರ್ಮಲಮ್ಮನವರು ಮೊಮ್ಮಕ್ಕಳೊಂದಿಗೆ ವಿನೂತನ ರೀತಿಯಲ್ಲಿ ಹೊಸ ವರ್ಷ ಆಚರಿಸಿದರು.
ಅಂಬಿಗ ಕುಮಾರ ಚೌಡಯ್ಯ ಎಂಬ ಅಂಕಿತನಾಮದಿಂದ 10 ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿದ ಗಣಾಚಾರದ ಶರಣ ದಿವಂಗತ ಮಲ್ಲಿಕಾರ್ಜುನ ಹಾದಿಮನಿಯವರ ಧರ್ಮಪತ್ನಿ ಗಣಾಚಾರದ ಶರಣೆ ನಿರ್ಮಲಮ್ಮನವರು ಶರಣ ತತ್ವದಡಿಯಲ್ಲಿ ಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ಮಾರ್ಗದರ್ಶನ ನೀಡುತ್ತ ಹೊಸ ವರ್ಷ ಆಚರಣೆಯನ್ನು 12ನೇ ಶತಮಾನದ ಶರಣರಾದ ಬಸವಣ್ಣನವರು, ಜೇಡರ ದಾಸಿಮಯ್ಯ, ಮಾದಾರ ಚನ್ನಯ್ಯ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ, ಸಮಗಾರ ಹರಳಯ್ಯ ಆದಿಯಾಗಿ ವಿವಿಧ ಶರಣರ ವಚನಗಳನ್ನು ಹಾಡುತ್ತ ಸಂತೋಷದಿಂದ ಹೊಸ ವರ್ಷ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಶರಣ ಶ್ರೀಪಾದ ಹಾದಿಮನಿ, ಸಹೋದರರಾದ ಆನಂದ, ಬಸವಪ್ರಭು ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.



