HomeGadag Newsಸಂಭ್ರಮದ ಶ್ರೀ ಅನ್ನದಾನೀಶ್ವರ ಮಹಾರಥೋತ್ಸವ

ಸಂಭ್ರಮದ ಶ್ರೀ ಅನ್ನದಾನೀಶ್ವರ ಮಹಾರಥೋತ್ಸವ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಹಾಲಕೆರೆ ಗ್ರಾಮದಲ್ಲಿ ಸಾವಿರಾರು ಭಕ್ತರ ಹರ್ಷೋದ್ಘಾರದ ಮಧ್ಯೆ ಶ್ರೀ ಅನ್ನದಾನೀಶ್ವರ ಸಂಸ್ಥಾನಮಠದ 174ನೇ ಶ್ರೀ ಅನ್ನದಾನೀಶ್ವರ ಮಹಾರಥೋತ್ಸವವು ಸಡಗರ ಸಂಭ್ರಮದಿಂದ ಶುಕ್ರವಾರ ಜರುಗಿತು.

ಹಾಲಕೆರೆ ಅನ್ನದಾನೀಶ್ವರ ಸಂಸ್ಥಾನಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ ಹರ-ಗುರು-ಚರ ಮೂರ್ತಿಗಳು ಭಾಗಿಯಾಗಿದ್ದರು. ಶ್ರೀಮಠದಿಂದ ಆರಂಭಗೊAಡ ರಥೋತ್ಸವ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಪುನಃ ಮಠಕ್ಕೆ ಆಗಮಿಸಿ ಮಂಗಲಗೊAಡಿತು.

ರಥೋತ್ಸವದಲ್ಲಿ ಮಹಿಳೆಯರು ಆರತಿ, ಕುಂಭ ಹೊತ್ತು ನಡೆದರೆ, ವಿವಿಧ ವಾದ್ಯ ಮೇಳಗಳು ರಥೋತ್ಸವದ ಸಂಭ್ರಮವನ್ನು ಹೆಚ್ಚಿಸಿದವು. ರಥದ ಕಳಸಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತರು ಭಕ್ತಿ ಭಾವ ಪ್ರದರ್ಶಿಸಿದರು.

ಗದಗ, ಬಾಗಲಕೋಟಿ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ದಾವಣಗೇರಿ, ಬೆಂಗಳೂರು, ಚಿಕ್ಕಮಗಳೂರು, ಉಡುಪಿ, ನರೇಗಲ್ಲ, ಗಜೇಂದ್ರಗಡ, ಜಕ್ಕಲಿ, ಯರೇಬೇಲೇರಿ, ನಿಡಗುಂದಿ, ನಿಡಗುಂದಿಕೊಪ್ಪ, ಮಾರನಬಸರಿ, ಬೂದಿಹಾಳ, ರಾಜೂರ, ವಳಬಳ್ಳಾರಿ, ಕರಮುಡಿ, ಯಲಬುರ್ಗಾ, ಕುಕನೂರ, ಗುಜಮಾಗಡಿ, ಸವಡಿ, ಡ.ಸ. ಹಡಗಲಿ ಸೇರಿದಂತೆ ಸುತ್ತಮುತ್ತಲಿನ ಸಾಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಮಹಿಳೆಯರು ಆರತಿ, ಕಳಸದೊಂದಿಗೆ ಸಾಗಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!