ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸಿಆರ್‌ಪಿಎಫ್‌ನಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡು ತವರೂರಿಗೆ ಮರಳಿದ ನಿವೃತ್ತ ಯೋಧ ಮೈಲಾರಪ್ಪ ಮ್ಯಾಟಣ್ಣವರ ಅವರನ್ನು, ಅಭಿಮಾನಿಗಳು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಪಟ್ಟಣದ ಸಾರ್ವಜನಿಕರು ಅದ್ಧೂರಿಯಾಗಿ ಮೆರವಣಿಗೆಯ ಮೂಲಕ ಸ್ವಾಗತಿಸಿದರು.
26 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದೇಶ ಸೇವೆ ಮಾಡಿ ಇದೀಗ ನಿವೃತ್ತಿಯಾಗಿ ಪಟ್ಟಣಕ್ಕೆ ಆಗಮಿಸಿದಾಗ ಗ್ರಾಮದ ಜನರು ತೆರೆದ ವಾಹನದಲ್ಲಿ ನಿವೃತ್ತ ಯೋಧನನ್ನು ಮೆರವಣಿಗೆ ಮಾಡಿ ಗೌರವ ಸೂಚಿಸಿದರು.
ನಂತರ ಪಟ್ಟಣದ ಯೋಧನ ಸ್ವಗೃಹದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಡಿ. ದೇವರಾಜ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಹೆಸ್ಕಾಂನ ಎಇಇ ಆಂಜಿನಪ್ಪ, ಪಟ್ಟಣದ ಸಾರಿಗೆ ಘಟಕ ವ್ಯವಸ್ಥಾಪಕಿ ಸವಿತಾ ಆದಿ, ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು, ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ್ ಮಡಿವಾಳರ, ಸಹೋದರ ಪಕ್ಕೀರೇಶ ಮ್ಯಾಟಣ್ಣನವರ ಮಾತನಾಡಿದರು.
ಹನುಮಂತ ಮ್ಯಾಟಣ್ಣನವರ, ಮಾರುತಿ ಹರಿಜನ, ಮಂಜುನಾಥ್ ಸೀತಮ್ಮನವರ, ತಿಪ್ಪಣ್ಣ ಸಂಶಿ, ಬಸವರಾಜ್ ಸೂರಣಗಿ, ರವಿ ಕರೆಣ್ಣನವರ, ಸಂಜೀವಣ್ಣನವರ ನಿವೃತ್ತ ಯೋಧರ ಸಂಘ, ಹಾಗೂ ಪೈಲ್ವಾನರ ಸಂಘದವರು ಉಪಸ್ಥಿತರಿದ್ದರು. ಶ್ರೀಕಾಂತ್ ಬಾಲೆಹೋಸುರ ನಿರೂಪಿಸಿದರು. ಲಕ್ಮೇಶ್ವರ ಹಾಗೂ ಬಾಲೆಹೊಸೂರು ಗ್ರಾಮದ ಅಪಾರ ಬಂಧುಗಳು, ಅಭಿಮಾನಿಗಳು, ಸ್ನೆಹಿತರು, ಗುರು-ಹಿರಿಯರು ಭಾಗವಹಿಸಿದ್ದರು.



