HomeGadag Newsಪಿಎಲ್‌ಡಿ ಬ್ಯಾಂಕ್ ಚುನಾವಣೆ: ಘೋಷಣೆಯಾಗದ ಫಲಿತಾಂಶ

ಪಿಎಲ್‌ಡಿ ಬ್ಯಾಂಕ್ ಚುನಾವಣೆ: ಘೋಷಣೆಯಾಗದ ಫಲಿತಾಂಶ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಚುನಾವಣೆಗೆ ರವಿವಾರ ಏಳು ಕ್ಷೇತ್ರಗಳಿಗೆ ಶೇ 90ರಷ್ಟು ಮತದಾನವವಾಗಿದ್ದು, ನ್ಯಾಯಾಲಯದ ತಡೆ ಆಜ್ಞೆಯಿರುವ ಹಿನ್ನೆಲೆಯಲ್ಲಿ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

ಒಟ್ಟು 14 ಕ್ಷೇತ್ರಗಳನ್ನು ಒಳಗೊಂಡಿರುವ ಪಿಎಲ್‌ಡಿ ಬ್ಯಾಂಕ್‌ಗೆ ಈಗಾಗಲೇ ಕಾಂಗ್ರೆಸ್ ಬೆಂಬಲಿತ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದು, ಆಡಳಿತ ನಡೆಸುವುದು ಬಹುತೇಕ ಖಚಿತವಾಗಿದೆ. ಆದರೆ ಉಳಿದ ಏಳು ಕ್ಷೇತ್ರಗಳಿಗೆ ಜ.5ರಂದು ಮತದಾನ ಹಾಗೂ ಫಲಿತಾಂಶ ಘೋಷಣೆ ನಿಗದಿಯಾಗಿತ್ತು. ಸ್ಪರ್ಧಿಸಿದ ಅಭ್ಯರ್ಥಿಗಳು ಚಾಲೆಂಜ್ ಮತಗಳ ಮೆಲೆ ನ್ಯಾಯಾಲದ ಮೊರೆ ಹೊಗಿದ್ದರು. ಆ ಮತಗಳನ್ನು ಹೊರತುಪಡಿಸಿ ಉಳಿದ ಮತಗಳ ಎಣಿಕೆ ಕಾರ್ಯ ನಡೆಯಿತಾದರೂ ಪಲಿತಾಂಶ ಹೊರಬೀಳಲಿಲ್ಲ.

ಏಳು ಕ್ಷೇತ್ರಗಳಲ್ಲಿ ಒಟ್ಟು 983 ಮತಗಳಿದ್ದು, ಅದರಲ್ಲಿ 886 ಮತಗಳು ಚಲಾವಣೆಗೊಂದ್ದು, ಶೇ 90ರಷ್ಟು ಮತದಾನವಾಗಿದೆ. ಚಾಲೆಂಜಿAಗ್ ಮತಗಳನ್ನು ಹೊರತುಪಡಿಸಿ ಉಳಿದ ಮತಗಳ ಎಣಿಕೆ ಕಾರ್ಯದಲ್ಲಿ ಮುಂದಿದ್ದ ಅಭ್ಯರ್ಥಿಗಳು ತಮ್ಮ ಜಯವನ್ನು ಖಚಿತ ಪಡಿಸಿಕೊಂಡು ವಿಜಯೋತ್ಸವ ಆಚರಿಸಿದರು. ಶಾಸಕ ಜಿ.ಎಸ್. ಪಾಟೀಲರ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು.

ಶಾಸಕ ಜಿ.ಎಸ್. ಪಾಟೀಲ, ಸಂಗಪ್ಪ ಮೆಣಸಿನಕಾಯಿ, ಯೂಸುಪ್ ಇಟಗಿ, ಅಂದಪ್ಪ ಬಿಚ್ಚೂರ, ವಿ.ಬಿ. ಸೋಮನಕಟ್ಟಿಮಠ, ಪ್ರಭು ಮೇಟಿ, ಇಸ್ಮಾಯಿಲ್ ಹೊರಪೇಟಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ಸಿಪಿಐ ಎಸ್.ಎಸ್. ಬಿಳಗಿ ಹಾಗೂ ಪಿಎಸ್‌ಐ ಪ್ರಕಾಶ ಬಣಕಾರ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img