HomeKarnataka Newsಚಾಮುಂಡೇಶ್ವರಿಯ ದರ್ಶನ ಪಡೆದ ಶಾಸಕ ಯತ್ನಾಳ್: ಚಾಮುಂಡಿಬೆಟ್ಟದಲ್ಲಿ ವಿಜಯೇಂದ್ರ ಫ್ಯಾನ್ಸ್ ಜೈಕಾರ

ಚಾಮುಂಡೇಶ್ವರಿಯ ದರ್ಶನ ಪಡೆದ ಶಾಸಕ ಯತ್ನಾಳ್: ಚಾಮುಂಡಿಬೆಟ್ಟದಲ್ಲಿ ವಿಜಯೇಂದ್ರ ಫ್ಯಾನ್ಸ್ ಜೈಕಾರ

For Dai;y Updates Join Our whatsapp Group

Spread the love

ಮೈಸೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಇಂದು ಮೈಸೂರಿಗೆ ಆಗಮಿಸಿದ್ದು, ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ವಿಶೇಷ ಪೂಜೆ ಬಳಿಕ ಮಾಧ್ಯಮಾಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ದೇವಾಲಯದಿಂದ ಹಾಗೆಯೇ ಹೊರಟು ಹೋದರು.

ಪೂಜೆ ಬಳಿಕ ದೇವಾಲಯದ ಒಳಗೆ ಸ್ವಲ್ಪ ಕಾಲ ವಿಶ್ರಾಂತಿ ಪಡೆದ ಶಾಸಕರು, ದೇವಾಲಯದ ಒಳಗಿರುವ ವಿನಾಯಕಸ್ವಾಮಿ ಮತ್ತು ಆಂಜನೇಯಸ್ವಾಮಿಗೂ ಪೂಜೆ ಸಲ್ಲಿಸಿದರು.

ಬಳಿಕ ದೇವಾಲಯದ ಹೊರಭಾಗದಲ್ಲಿ ಅಭಿಮಾನಿಗಳಿಗೆ ಸೆಲ್ಫಿ ನೀಡಿದರು. ಈ ವೇಳೆ ಮಾಧ್ಯಮಗಳು ಅವರ ಪತ್ರಿಕ್ರಿಯೆ ಪಡೆಯಲು ಕರೆದಾಗ ಕೈ ಮುಗಿದು ಅಲ್ಲಿಂದ ಹೊರಟರು.

ಈ ವೇಳೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಮಾನಿಗಳು ‘ಜೈ ವಿಜಯೇಂದ್ರ, ಜೈ ಯಡಿಯೂರಪ್ಪ’ ಎಂದು ಕೂಗಿದ್ದಾರೆ. ಈ ವೇಳೆ ತೀವ್ರ ಮುಜುಗರ ಉಂಟಾಗಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿ ಅಲ್ಲಿಂದ ಹೋಗಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!