HomeEntertainmentಸೈಫ್ ಅಲಿ ಖಾನ್ ಮೇಲೆ ದಾಳಿ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ಮುಂಬೈ ಪೊಲೀಸರು

ಸೈಫ್ ಅಲಿ ಖಾನ್ ಮೇಲೆ ದಾಳಿ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ಮುಂಬೈ ಪೊಲೀಸರು

For Dai;y Updates Join Our whatsapp Group

Spread the love

ಕಳೆದ ಕೆಲ ತಿಂಗಳ ಹಿಂದೆ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಮನೆಗೆ ನುಗ್ಗಿದ ಆಗಂತುಕನೋರ್ವ ಸೈಫ್‌ ಮೇಲೆ ಗಂಭೀರವಾಗಿ ದಾಳಿ ನಡೆಸಿದ್ದ. ಪ್ರಕರಣದಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಂದು ನ್ಯಾಯಾಲಯಕ್ಕೆ 1000 ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. 70 ಮಂದಿಯ ಹೇಳಿಕೆಗಳನ್ನು ಚಾರ್ಜ್ ಶೀಟ್ ಒಳಗೊಂಡಿದ್ದು, ಹಲವು ಪ್ರತ್ಯಕ್ಷ ದರ್ಶಿಗಳ ಹೇಳಿಕೆಗಳು ಸಹ ಚಾರ್ಜ್ ಶೀಟ್​ನಲ್ಲಿದೆ. ಜೊತೆಗೆ ಪ್ರಕರಣ ಕುರಿತಾಗಿ ಹಲವು ಮಹತ್ವದ ಅಂಶಗಳು, ಸಾಕ್ಷ್ಯಗಳ ಮಾಹಿತಿಗಳನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್​ ನಲ್ಲಿ ಅಂದಿನ ಸಂಪೂರ್ಣ ಘಟನೆಯ ಮಾಹಿತಿಯನ್ನು ನೀಡಲಾಗಿದೆ. ಜನವರಿ 16 ರಂದು ಆರೋಪಿ ಷರೀಫುಲ್ ಇಸ್ಲಾಂ ಮೊದಲಿಗೆ ಗೇಟ್​ನಿಂದ ಒಳ ಹೋಗುವ ಪ್ರಯತ್ನ ಮಾಡಿದ್ದಾನೆ.  ಆದರೆ ಅಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದ ಕಾರಣ ಅದು ಸಾಧ್ಯವಾಗಿಲ್ಲ. ಬಳಿಕ ಕಾಂಪೌಂಡ್ ಹಾರಿ ಒಳಗೆ ಹೋಗಿ, ಅಲ್ಲಿ ಏಸಿ ಡಕ್ ಮೂಲಕ ಅಪಾರ್ಟ್​ಮೆಂಟ್ ಒಳಗೆ ಹೋಗಿದ್ದಾನೆ. ಬಳಿಕ ಮೆಟ್ಟಿಲು ಬಳಸಿ ಎಂಟು ಮಹಡಿ ಮೇಲೆ ಏರಿ ಸೈಫ್ ಅಲಿ ಖಾನ್​ರ ಮನೆಯನ್ನು ಕಿಟಕಿ ಮೂಲಕ ಪ್ರವೇಶ ಮಾಡಿದ್ದಾನೆ.

ಸೈಫ್ ಅಲಿ ಖಾನ್ ಮನೆಯಲ್ಲಿ ಸಿಕ್ಕಿರುವ ಬೆರಳಚ್ಚಿಗೂ, ಆರೋಪಿಯ ಬೆರಳಚ್ಚೂ ಒಂದೇ ಆಗಿದೆ. ಸೈಫ್ ಅಲಿ ಖಾನ್ ದೇಹದಿಂದ ತೆಗೆದ ಚಾಕುವಿನ ತುಂಡು ಮತ್ತು ಆರೋಪಿ ಚಾಕುವನ್ನು ಬಿಸಾಡಿದ್ದ ಜಾಗದಿಂದ ವಶಪಡಿಸಿಕೊಂಡ ಚಾಕುವಿನ ತುಂಡು ಒಂದೇ ಆಗಿದೆ. ಆರೋಪ ಪಟ್ಟಿಯಲ್ಲಿ ನಟಿ ಕರೀನಾ ಕಪೂರ್ ಸೇರಿದಂತೆ ಹಲವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!