HomeGadag Newsಗುಂಜೀಕರರ ಜೀವನ ಭವಿಷ್ಯದ ಮಾರ್ಗದರ್ಶನವಾಗಲಿ

ಗುಂಜೀಕರರ ಜೀವನ ಭವಿಷ್ಯದ ಮಾರ್ಗದರ್ಶನವಾಗಲಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ನೌಕರರ ನಾಡಿ ಮಿಡಿತ ಅರಿತು, ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ, ಗದಗ ಜಿಲ್ಲಾಧ್ಯಕ್ಷರಾಗಿ ಮೂರು ಅವಧಿಗೆ ಸೇವೆ ಸಲ್ಲಿಸಿದ ಡಾ. ರವಿ ಎಲ್.ಗುಂಜೀಕರ ಸಾಧನೆ ಕುರಿತಾಗಿ ವಿಶೇಷ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲು ರವಿ ಗುಂಜೀಕರ ಅಭಿಮಾನಿ ಬಳಗದಿಂದ ತಿರ್ಮಾನಿಸಲಾಗಿದ್ದು, ಆಂಗ್ಲ ಉರ್ದು ಶಾಲೆಯಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ ಕಾರ್ಯಕ್ರಮ ನಡೆಸಲು ತಿರ್ಮಾನಿಸಲಾಗಿದೆ ಎಂದು ಗ್ರಂಥ ಸಂಪಾದಕ ಐ.ಕೆ. ಕಮ್ಮಾರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಇಲಾಖೆ ಸೇರಿದಂತೆ ಹಲವಾರು ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಸೇವೆ ಮಾಡುವುದರ ಜೊತೆಗೆ ಹೋರಾಟದ ಮೂಲಕವೂ ಜನಮನ್ನಣೆ ಗಳಿಸಿದ್ದಾರೆ. ಸರ್ಕಾರಿ ನೌಕರರ ಜಠಿಲ ಸಮಸ್ಯೆ ಬಗೆಹರಿಸುವಲ್ಲಿ ನಿರಂತರ ಶ್ರಮ ಪಟ್ಟಿದ್ದಾರೆ. ಅವರ ಜೀವನ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಒಬ್ಬ ವ್ಯಕ್ತಿಯ ಅಭಿನಂದನಾ ಗ್ರಂಥ ತರುವುದು ಸುಲಭದ ಮಾತಲ್ಲ. ಉನ್ನತ ಸಾಧನೆ ಮಾಡಿದವರಿಗೆ ಮಾತ್ರ ಈ ಶ್ರೆಯಸ್ಸು ಸಲ್ಲುತ್ತದೆ ಎಂದರು.

ಸರ್ಕಾರಿ ನೌಕರರ ಬಗ್ಗೆ ರವಿ ಗುಂಜೀಕರ ವಿಶೇಷ ಕಾಳಜಿ ಹೊಂದಿದ್ದು, ಸಾಮಾಜಿಕ ಹೋರಾಟದಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರ ಇಂತಹ ಸೇವೆಯನ್ನು ಮನಗಂಡು ಅಭಿನಂದನಾ ಗ್ರಂಥವನ್ನು ಹೊರ ತರಲು ತಿರ್ಮಾನಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ. ಅವರ ಸಾಧನೆಯ ಬಗ್ಗೆ ವಿವಿಧ ಮಠಾಧೀಶರು ಹಾಗೂ ಅವರನ್ನು ಹತ್ತಿರದಿಂದ ನೋಡಿದ ಆಪ್ತ ಬಳಗದವರು ತಮ್ಮ ಅಭಿಪ್ರಾಯ-ಅನಿಸಿಕೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶ್ವನಾಥ ಕಮ್ಮಾರ, ವಿಶ್ವನಾಥ ಕಮ್ಮಾರ, ಡಾ. ಶಿವಾಜಿ ಕುರಿ, ಡಾ. ಪ್ರಲ್ಹಾದ ಗೆಜ್ಜಿ, ಮಾರುತಿ ಹಾರೋಗೇರಿ, ಆರ್.ಎಚ್. ಜಂಗಣಾವಾರಿ, ಮಲ್ಲಿಕಾರ್ಜುನ ಹಣಸಿ, ಸಿದ್ದಲಿಂಗೇಶ್ವರ ಸಜ್ಜನಶೆಟ್ಟರ, ಮಂಜುನಾಥ ಮಾನೆ, ಎಸ್.ಆರ್. ಹಿರೇಮಠ, ಎಚ್.ವಾಯ್. ಸಂದಕದ, ಕೆ.ಎಫ್. ಹಳ್ಯಾಳ, ಆರ್.ಎಮ್. ನಿಂಗನಾಯಕರ, ಎಸ್.ಟಿ. ಪಾವನ, ಎಂ.ಎಂ. ಹಿರೇಮಠ, ಎಸ್.ಎ. ನದಾಫ್, ಎಂ. ಎಂ. ಹಣಸಿ ಉಪಸ್ಥಿತರಿದ್ದರು.

ಚಿತ್ರದುರ್ಗದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಮಣಕವಾಡದ ಅಭಿನವ ಮೃತ್ಯುಂಜಯ ಮಹಾಸ್ವಾಮೀಜಿ, ಪ.ಪೂ. ಕಲ್ಲಯ್ಯಜ್ಜನವರು ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಸಮ್ಮುಖ ವಹಿಸಲಿದ್ದಾರೆ. ಸಚಿವ ಡಾ. ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಬಸವರಾಜ ಹೊರಟ್ಟಿ, ಬಸವರಾಜ ಬೊಮ್ಮಾಯಿ, ಎಸ್.ವ್ಹಿ. ಸಂಕನೂರ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಐ.ಕೆ. ಕಮ್ಮಾರ ತಿಳಿಸಿದರು.

“ರವಿ ಗುಂಜೀಕರರು 60 ವಸಂತ ಪೂರೈಸಿದ ಹಿನ್ನೆಲೆಯಲ್ಲಿ 60 ಸಸಿ ನೆಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 60 ಸಾಧಕರಿಗೆ ವಿಶೇಷ ಗೌರಪೂರ್ವಕ ಸನ್ಮಾನ ಕಾರ್ಯಕ್ರಮ, ಪ್ರೌಢಶಾಲೆ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.”

– ಡಾ. ಬಸವರಾಜ ಬಳ್ಳಾರಿ.

ಪ್ರಧಾನ ಕಾರ್ಯದರ್ಶಿ,

ಜಿಲ್ಲಾ ಸರ್ಕಾರಿ ನೌಕರರ ಸಂಘ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!