ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿಗಳು’ ಮೂಲಕ ನಟ ಮಡೆನೂರು ಮನು ಜನಪ್ರಿಯತೆ ಪಡೆದುಕೊಂಡಿದ್ದು, ಅಲ್ಲದೇ ಕಾಮಿಡಿ ಕಿಲಾಡಿಗಳು ಸೀಸನ್ 2ರ ವಿನ್ನರ್ ಕೂಡ ಆಗಿದ್ದರು.
ಕಾಮಿಡಿ ಕಿಲಾಡಿಗಳು ಮೂಲಕ ಜನಪ್ರಿಯತೆ ಪಡೆದು ಸದ್ಯ ಸಿನಿಮಾಗಳಲ್ಲೂ ಬ್ಯುಸಿಯಾಗಿರುವ ಮಡೆನೂರು ಮನು ಮೇಲೆ ಕಿರುತೆರೆ ನಟಿ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಕಿರುತೆರೆ ನಟಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಇನ್ನೂ, ನಿರ್ದೇಶಕ ಯೋಗರಾಜ್ ಭಟ್ ಅವರ ಬ್ಯಾನರ್‌ನಲ್ಲಿ ಮೂಡಿಬಂದ ಸಿನಿಮಾದಲ್ಲಿ ನಟ ಮಡೆನೂರು ಮನು ನಟಿಸಿದ್ದಾರೆ.
ಈ ಕುಲದಲ್ಲಿ ಕೀಳ್ಯಾವೋದು ಸಿನಿಮಾ ನಾಳೆ ರಿಲೀಸ್ ಆಗಬೇಕಿದೆ. ಆದ್ರೆ ಇದರ ಮಧ್ಯೆ ನಟ ಮಡೆನೂರು ಮನು ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರು ನಟ ಮಡೆನೂರು ಮನುಗಾಗಿ ಹುಡಕಾಟ ನಡೆಸುತ್ತಿದ್ದಾರೆ.



