HomeCrime Newsಮಹಿಳೆಯರಿಗೆ ಮುತ್ತು ಕೊಟ್ಟು ಎಸ್ಕೇಪ್ ಆಗುತ್ತಿದ್ದ ಕಾಮುಕ ಕೊನೆಗೂ ಅಂದರ್..!

ಮಹಿಳೆಯರಿಗೆ ಮುತ್ತು ಕೊಟ್ಟು ಎಸ್ಕೇಪ್ ಆಗುತ್ತಿದ್ದ ಕಾಮುಕ ಕೊನೆಗೂ ಅಂದರ್..!

For Dai;y Updates Join Our whatsapp Group

ಬೆಂಗಳೂರು: ಪಾರ್ಕ್‌, ರೋಡ್ಎನ್ನದೇ ಮಹಿಳೆಯರಿಗೆ ಮುತ್ತು ಕೊಟ್ಟು ಎಸ್ಕೇಪ್ ಆಗುತ್ತಿದ್ದ ಕಾಮುಕನನ್ನು ಕೊನೆಗೂ ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ. ಮದನ್ ಬಂಧಿತ ಆರೋಪಿಯಾಗಿದ್ದು,  ಒಂದೇ ದಿನ ಒಂದೇ ಸಮಯಲ್ಲಿ ಇಬ್ಬರುಮಹಿಳೆಯರೊಂದಿಗೆ ಅಸಭ್ಯ ವರ್ತಸಿದ್ದು, ಹುಡುಗಿಯರನ್ನ ತಬ್ಬಿ ತುಟಿಗೆ ಬಲವಂತವಾಗಿ ಮುತ್ತು ಕೊಟ್ಟಿದ್ದಾನೆ ಎಂದು ವರದಿಯಾಗಿದೆ.

ಇದೇ ತಿಂಗಳ 6ನೇ ತಾರೀಕಿನಂದು ಸಂಜೆ 7 ಗಂಟೆ ಸುಮಾರಿಗೆ ಘಟನೆ ಕುಟುಂಬದ ಜೊತೆಗೆ ವಾಕ್ ಬಂದಿದ್ದ ಮಹಿಳೆಯೊಂದಿಗೆ ಅಸಭ್ಯ ವರ್ತಸಿದ್ದಾನೆ ಎನ್ನಲಾಗಿದ್ದು, ನಂತರ ಪಾರ್ಕ್ ನಲ್ಲಿ ಇನ್ನೊಬ್ಬ ಮಹಿಳೆಯನ್ನ ಬಲವಂತಾಗಿ ತಬ್ಬಿಕೊಂಡು ತುಟಿಗೆ ಮುತ್ತು ಕೊಟ್ಟಿದ್ದಾನೆ ಎಂದು ಹೇಳಲಾಗಿದೆ.

ಇನ್ನು ಬಗ್ಗೆ ವಿರೋಧಿಸಿ ಮಹಿಳೆ, ಆರೋಪಿಯನ್ನ ಪ್ರಶ್ನೆ ಮಾಡಿದಾಗಯಾರಿಗೂ ಹೇಳಿ ಏನೂ ಆಗಲ್ಲ ಅಂತ ಹೇಳಿ ಎಸ್ಕೇಪ್ ಆಗಿದ್ದಾನಂತೆ ಕಿರಾತಕ. ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣವನ್ನೂ ಸಹ ದಾಖಲಿಸಿಕೊಂಡಿದ್ದರು.

ದೂರಿನ ಮೇರೆಗೆ ಪೊಲೀಸರು ಕಾಮುಕ ಮದನ್ಗಾಗಿ ಹುಡುಕಾಟ ನಡೆಸುತ್ತಿದ್ದಾಗ ಬಾಣಸವಾಡಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಪುಲಕೇಶಿ ನಗರ ಪೊಲೀಸರು, ಕಾಮುಕ ಮದನ್ನನ್ನು  ವಿಚಾರಣೆ ನಡೆಸುತ್ತದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img