ಚಾಮರಾಜನಗರ:– ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಮಾಡಲಾಗಿದ್ದು, ಈ ಬಾರಿಯೂ ಮಾದಪ್ಪ ಕೋಟಿ ಒಡೆಯನಾಗಿದ್ದಾನೆ.
ಜಿಲ್ಲೆಯ ಹನೂರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 33 ದಿನಗಳ ಅವಧಿಯಲ್ಲಿ 2.2 ಕೋಟಿ ರೂ ಸಂಗ್ರಹವಾಗಿದೆ.
ಎಸ್, ಇಲ್ಲಿನ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ಜರುಗಿತು. ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 33 ದಿನಗಳಲ್ಲಿ ಒಟ್ಟು ₹2,20,22,454 ಹಾಗೂ ಚಿನ್ನ 55 ಗ್ರಾಂ, ಬೆಳ್ಳಿ 1 ಕೆ.ಜಿ 627 ಗ್ರಾಂ ಹುಂಡಿಯಲ್ಲಿ ದೊರೆತಿದ್ದು, ₹2000 ಮುಖಬೆಲೆಯ ಏಳು ನೋಟುಗಳು ಹಾಗೂ ವಿದೇಶಿಯ 30 ನೋಟುಗಳು ದೊರೆತಿವೆ.
ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ರಘು ದೇವಾಲಯದ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಮತ್ತು ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿ ಹಾಜರಿದ್ದರು.



