HomeGadag Newsಸಂಘ ಸದೃಢವಾಗಿದ್ದಾಗ ಮಾತ್ರ ನೌಕರರಿಗೆ ನಿರ್ಭೀತಿ

ಸಂಘ ಸದೃಢವಾಗಿದ್ದಾಗ ಮಾತ್ರ ನೌಕರರಿಗೆ ನಿರ್ಭೀತಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ದೇಶದ 24 ರಾಜ್ಯಗಳಲ್ಲಿ ಕೇಂದ್ರದ ಮಾದರಿಯಲ್ಲಿಯೇ ಸರಕಾರಿ ನೌಕರರಿಗೆ ವೇತನ ನೀಡಲಾಗುತ್ತಿದೆ. ಅದನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸಬೇಕು ಎನ್ನುವ ಉದ್ದೇಶ ಹೊಂದಿದ್ದೇವೆ. ಸರಕಾರದಿಂದ ಈಗಾಗಲೇ ಸಾಕಷ್ಟು ಸೌಲಭ್ಯ ಪಡೆದಿದ್ದು, ಇನ್ನಷ್ಟು ಸೌಲಭ್ಯಗಳನ್ನು ಪಡೆಯಲು ಎಲ್ಲ ಸರಕಾರಿ ನೌಕರರ ಪ್ರೇರಣೆ, ಪ್ರೋತ್ಸಾಹ ಅಗತ್ಯವಾಗಿದೆ ಎಂದು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

ಶನಿವಾರ ನಗರದ ಭೀಮಸೇನ್ ಜೋಶಿ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನೂತನ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ನೌಕರರ ಜನಸ್ನೇಹಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಸರಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಮತ್ತು 7ನೇ ವೇತನ ಜಾರಿಯಾದ ನಂತರ ಕೇಂದ್ರ ಸರಕಾರಿ ನೌಕರರ ಮಾದರಿಯಲ್ಲಿ ವೇತನ ಜಾರಿಗೊಳಿಸಲು ಪ್ರಯತ್ನಿಸಲಾಗುವುದು. ಕಳೆದ 6 ವರ್ಷಗಳಿಂದ ಸಂಘಟನೆಯ ರಾಜ್ಯಾಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಈ ಅವಧಿಯಲ್ಲಿ ಸಂಘಟನೆಯಲ್ಲಿ ಆಡಳಿತಾತ್ಮಕ ಶಿಸ್ತು, ಆರ್ಥಿಕ ಶಿಸ್ತು ತರುವ ಕೆಲಸ ಮಾಡಲಾಗಿದೆ. ಸಂಘಟನೆಯಲ್ಲಿ ಶಿಸ್ತು ಇರುವ ಕಾರಣದಿಂದಲೇ ಇವತ್ತು ಸಂಘಟನೆ ಸದೃಢವಾಗಿದೆ. ಸಂಘ ಸದೃಢವಾಗಿದ್ದಾಗ ಮಾತ್ರ ನೌಕರರ ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯ ಎಂದರು.

ಸರ್ಕಾರಿ ನೌಕರರಿಗೆ ಒತ್ತಡ ಇರುವುದು ನಿಜ. ಕಡಿಮೆ ನೌಕರ ಸಂಖ್ಯೆಯಲ್ಲಿ ಹೆಚ್ಚಿನ ಸೇವೆ ಪಡೆಯಲು ಸರ್ಕಾರ ಚಿಂತಿಸುವುದು ಸತ್ಯ. ಈ ನಡುವೆಯೂ ನೌಕರರು ಒತ್ತಡದಿಂದ ಹೊರಬಂದು ಉತ್ತಮ ಸೇವೆ ನೀಡಬೇಕಾಗಿದೆ. ಅದಕ್ಕಾಗಿ ನೌಕರರು ದೈಹಿಕ, ಮಾನಸಿಕ ಆರೋಗ್ಯದ ಕಡೆಗೆ ಗಮನ ಕೊಡಬೇಕು ಎಂದು ಸಿ.ಎಸ್. ಷಡಾಕ್ಷರಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಕಾಲಕಾಲಕ್ಕೆ ತುಟ್ಟಿಭತ್ಯೆ, ವೇತನ ಪರಿಷ್ಕರಣೆಗೆ ಕಾರಣವೇ ಸರಕಾರಿ ನೌಕರರ ಸಂಘಟನೆ. 105 ವರ್ಷಗಳ ಇತಿಹಾಸ ಹೊಂದಿರುವ ಸಂಘಕ್ಕೆ ಷಡಾಕ್ಷರಿ ಅವರು ಹೊಸ ಚೈತನ್ಯ ತುಂಬಿದ್ದಾರೆ. ಸಂಘಟನೆಯನ್ನು ಬಲಗೊಳಿಸಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ, ನೌಕರರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುವ ಕೆಲಸ ಮಾಡುತ್ತಿದ್ದಾರೆ. ನೂತನ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಅವರು ಜಿಲ್ಲೆಯ ನೌಕರರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಆಶಿಸಿದರು.

ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಸರಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರಿಗೌಡ ಎಚ್, ಗೌರವಾಧ್ಯಕ್ಷ ಬಸವರಾಜ ಎಸ್, ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಶೇಡಸ್ಯಾಳ, ಆರ್. ಮೋಹನಕುಮಾರ, ರವಿ ಗುಂಜೀಕರ್, ಎಲ್. ಮೋಹನಕುಮಾರ, ಧಾರವಾಡ ಜಿಲ್ಲಾಧ್ಯಕ್ಷ ಎಸ್.ಎಸ್. ಸಿದ್ದನಗೌಡ್ರ, ಬಸವರಾಜ ರಾಯವ್ವಗೋಳ, ಪ್ರೇಮನಾಥ ಗರಗ, ಮಲ್ಲೇಶ ಕರಿಗಾರ, ಎಸ್.ಎನ್. ಬಳ್ಳಾರಿ, ಬಿ.ಎಸ್. ಪೂಜಾರ, ನಂದಾ, ಪ್ರಲ್ಹಾದ ಗೆಜ್ಜಿ, ಮುನೀಶ್ವರ ಚೂರಿ, ಡಿ.ಟಿ. ವಾಲ್ಮೀಕಿ, ಟಿ.ಎಚ್. ತಳವಾರ ಸೇರಿದಂತೆ ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ವೃಂದ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಕಾಯಕತತ್ಪರತೆ, ಸೇವಾ ಮನೋಭಾವ ಇದ್ದವರು ಮಾತ್ರ ನಾಯಕರಾಗಲು ಸಾಧ್ಯ. ಸಂಘಟನೆ ಮತ್ತು ನೌಕರರ ಆಶೀರ್ವಾದದಿಂದ ಇಂದು ಅಧ್ಯಕ್ಷ ಮತ್ತು ಪದಾಧಿಕಾರಿಗಳು ಪದಗ್ರಹಣ ಮಾಡಿದ್ದಾರೆ. ನೌಕರರ ಮನಸ್ಥಿತಿ ಅರ್ಥ ಮಾಡಿಕೊಂಡು ಸಂಘದ ಸದಸ್ಯರು ಕೆಲಸ ಮಾಡಬೇಕು. ಕೇವಲ ಅಧ್ಯಕ್ಷರು ಪದಾಧಿಕಾರಿಗಳಿಂದ ಸಂಘಟನೆ ಕಟ್ಟಲು ಸಾಧ್ಯವಿಲ್ಲ. ಪ್ರತಿಯೊಬ್ಬ ನೌಕರರು ಸಂಘದ ಜೀವಾಳವಾಗಿ ಕೆಲಸ ಮಾಡಬೇಕು.

ಸಿ.ಎಸ್. ಷಡಾಕ್ಷರಿ.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಸಿ.ಎಸ್. ಷಡಕ್ಷರಿ ಅವರ ನೇತೃತ್ವದಲ್ಲಿ ನಡೆದ ಹೋರಾಟದಿಂದಾಗಿ ಸರಕಾರಿ ನೌಕರರ ವೇತನ ಪರಿಷ್ಕರಣೆ ಸಾಧ್ಯವಾಗಿದೆ. ಅಲ್ಲದೇ ಮುಂಬರುವ ದಿನಗಳಲ್ಲಿ ಒಪಿಎಸ್ ಹಾಗೂ ಕೇಂದ್ರ ಸರಕಾರದ ಮಾದರಿ ವೇತನ ಜಾರಿಗೊಳಿಸಲು ಹೋರಾಟ ನಡೆಸುವ ಮೂಲಕ ಸರಕಾರಿ ನೌಕರರ ಕಣ್ಮಣಿಯಾಗಿದ್ದಾರೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!