ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜ್ಙಾನಭಾರತಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಬ್ರಹಾಂ,ನಿಖಿಲ್ ಮತ್ತು ಧನುಷ್ ಬಂಧಿತರು, ಆಗಸ್ಟ್ 2 ರಂದು ಮರಿಯಪ್ಪನಪಾಳ್ಯದಲ್ಲಿ ಮನೆ ಮಾಲೀಕ ಕಾಂತರಾಜು ಹುಟ್ಟೂರು ತುಮಕೂರಿಗೆ ಹೋಗಿದ್ದರು.
ಈ ವೇಳೆ ಆರೋಪಿಗಳು ಬಾಗಿಲು ಒಡೆದು ಕಳ್ಳತನ ಮಾಡಿದ್ದರು. ಚಿನ್ನ,ಬೆಳ್ಳಿ ಮತ್ತು ನಗದು ಸೇರಿ 70 ಲಕ್ಷ ಮೌಲ್ಯದ ವಸ್ತು ಕಳ್ಳತನ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆಗೆ ಇಳಿದಿದ್ದ ಜ್ಙಾನಭಾರತಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೂ ಆರೋಪಿಗಳಿಂದ 430 ಗ್ರಾಂ ಚಿನ್ನ,800 ಗ್ರಾಂ ಬೆಳ್ಳಿ ಸೇರಿ 50 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆದಿದ್ದು, ಘಟನೆ ಸಂಬಂಧ ಜ್ಙಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



