HomeGadag Newsಭಗತ್ ಸಿಂಗ್‌ರ ದೇಶಪ್ರೇಮ ಅಮೋಘ: ಕೃಷ್ಣಗೌಡ ಎಚ್. ಪಾಟೀಲ

ಭಗತ್ ಸಿಂಗ್‌ರ ದೇಶಪ್ರೇಮ ಅಮೋಘ: ಕೃಷ್ಣಗೌಡ ಎಚ್. ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕ್ರಾಂತಿಕಾರಿ ಭಗತ್ ಸಿಂಗ್‌ರ ದೇಶಪ್ರೇಮ ಅಮೋಘವಾಗಿದೆ. ಇಂದಿನ ಯುವಜನತೆ ಅವರ ದೇಶಪ್ರೇಮ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಕರೆ ನೀಡಿದರು.

ಅವರು ತಾಲೂಕಿನ ಅಸುಂಡಿ ಗ್ರಾಮದಲ್ಲಿ ಇತ್ತೀಚೆಗೆ ಕ್ರಾಂತಿಕಾರಿ ಭಗತ್ ಸಿಂಗ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಗತ್ ಸಿಂಗ್ ಅವರ 118ನೇ ಜಯಂತ್ಯುತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಅಸಂಖ್ಯಾತ ವೀರರು ತ್ಯಾಗ ಮಾಡಿದ್ದಾರೆ. ಇಂದಿನ ಯುವಜನತೆ ಅವರೆಲ್ಲರ ಸೇವೆ ನೆನೆದು ಜಯಂತ್ಯುತ್ಸವ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಅಲ್ತಾಫ್ ಕಾಗದಗಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಉಪಾಧ್ಯಕ್ಷೆ ಜಯಶ್ರೀ ಅಣ್ಣಿಗೇರಿ, ಗ್ರಾ.ಪಂ ಸದಸ್ಯರಾದ ಸೋಮರಡ್ಡಿ ರಾಮೇನಹಳ್ಳಿ, ರಾಘವೇದ್ರರಡ್ಡಿ ಹುಲಕೋಟಿ, ಯಲ್ಲರಡ್ಡಿ ಬಸವರಡ್ಡಿಯವರು, ತಾಜುದ್ದೀನ್ ಓಲೇಕಾರ, ಮೈಲಪ್ಪ ಹೊಸಮನಿ, ರೇಖಾ ತಿಮ್ಮನಗೌಡ್ರ, ನೇತ್ರಾವತಿ ಕರಿಗಾರ, ದ್ರಾಕ್ಷಾಯಣಿ ವಗ್ಗನವರ, ಮೈಲವ್ವ ಭಾವಿಮನಿ, ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಕರಿಗಾರ, ಎಚ್.ಕೆ. ಭೂಮಕ್ಕನವರ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸೈನಿಕರನ್ನು ಹಾಗೂ ಸೇವೆ ಮಾಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಜಾನಪದ ಕಲಾವಿದ ಮಹಾಂತೇಶ ದಿಂಡೇನವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಹಿರಿಯ ಜನಪದ ಕಲಾವಿದ ವೀರಣ್ಣ ಚನ್ನಪ್ಪ ಅಂಗಡಿ ಭಗತ್ ಸಿಂಗ್ ಅವರ ಜೀವನ ಚರಿತ್ರೆ ಕುರಿತ ಕ್ರಾಂತಿಗೀತೆ ಹಾಡಿದರು. ಅಸುಂಡಿ ಗ್ರಾಮದ ಹಿರಿಯ ಕಲಾವಿದರಾದ ನಾಗಪ್ಪ ಸಾಸ್ವಿಹಳ್ಳಿ, ಸಿದ್ಧಪ್ಪ ವಗ್ಗನವರ ಹಾಗೂ ಸಂಗಡಿಗರು ಡೊಳ್ಳಿನ ಪದ ಹಾಡಿದರು. ಭಗತ್ ಸಿಂಗ್ ಅಭಿಮಾನಿ ಬಳಗದ ಅಧ್ಯಕ್ಷ ರವಿಗೌಡ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಸಂತೋಷ ಎಸ್. ರಾಮೇನಹಳ್ಳಿ ನಿರೂಪಿಸಿದರು. ದ್ಯಾಮಣ್ಣ ಕಮತರ ವಂದಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!