ಮಂಡ್ಯ: ಮಂಡ್ಯದ ಕೆ.ಆರ್.ಪೇಟೆಯಲ್ಲಿ ವರುಣಾರ್ಭಟ ಮುಂದುವರೆದಿದ್ದು, ಬಾರಿ ಮಳೆ, ಗಾಳಿಗೆ ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆಯ ಮೇಲ್ಫಾವಣಿ ಪೀಸ್ ಪೀಸ್ ಆಗಿದೆ. ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು,
ಮಳೆರಾಯನ ಅವಾಂತರದಿಂದ ಮೋಹಿನಿ-ಶಿವಕುಮಾರ್ ಎಂಬುವವರಿಗೆ ಸೇರಿದ ಹೊಸ ಮನೆ ಹಾನಿಯಾಗಿದೆ. ಶಿವಕುಮಾರ್ ಕುಟುಂಬ ಹಲವು ವರ್ಷಗಳಿಂದ ಶಿಥಿಲಗೊಂಡ ಮನೆಯಲ್ಲಿದ್ದರು. ಇದೀಗ ಸಾಲ ಮಾಡಿ ನೂತನ ಮನೆ ನಿರ್ಮಾಣ ಮಾಡಿದ್ದರು.
ಇನ್ನು ಒಂದು ತಿಂಗಳಲ್ಲಿ ಮನೆ ಗೃಹಪ್ರವೇಶಕ್ಕೆ ಸಿದ್ಧತೆ ಮಾಡಲಾಗಿತ್ತು. ಆದ್ರೆ ಗಾಳಿ ಸಹಿತ ಭಾರಿ ಮಳೆಗೆ ಮನೆಯ ಸಿಮೆಂಟ್ ಸೀಟುಗಳು ಪುಡಿ ಪುಡಿಯಾಗಿದೆ. ವರುಣನ ವಕ್ರದೃಷ್ಟಿಗೆ ಸುಮಾರು ಒಂದು ಲಕ್ಷ ನಷ್ಟವಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಮನವಿ ಮಾಡಲಾಗಿದೆ.



