ಬೆಂಗಳೂರು: ಬೆಂಗಳೂರಿನಲ್ಲಿ ವೈದ್ಯೆ ಕೃತಿಕಾ ಕೊಲೆ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಪೊಲೀಸರ ತನಿಖೆ ಚುರುಕುಗೊಳಿಸಿದಂತೆಲ್ಲ ಒಂದೊಂದೇ ರೋಚಕ ರಹಸ್ಯಗಳು ಬಯಲಾಗುತ್ತಿವೆ. ಕಿಲ್ಲರ್ ಡಾಕ್ಟರ್ ಅದೆಷ್ಟು ಕ್ರೂರಿ, ಅದೆಂಥಾ ಕ್ರಿಮಿನಲ್ ಮೈಂಡೆಡ್ ಎನ್ನುವುದನ್ನು ನೋಡಿದರೆ ಬೆಚ್ಚಿಬೀಳಿಸುವಂತಿದೆ. ಆದ್ರೆ ಕಾಯಿಲೆ ಬಿದ್ದವಳ ಜೊತೆಗೆ ಬದುಕಲು ಇಷ್ಟ ಇಲ್ಲ ಕಿಲ್ಲರ್ ಡಾಕ್ಟರ್ ಮಹೇಂದ್ರನಿಗೆ ಇಷ್ಟ ಇರಲಿಲ್ಲ.
ಜೊತೆ ಬೇರೊಬ್ಬಳ ಜೊತೆ ಸಂಬಂಧ ಬೇರೆ ಇತ್ತು. ಹೀಗಾಗಿ ಸಿನಿಮಾ ಸ್ಟೈಲ್ನಲ್ಲೇ ಡಾಕ್ಟರ್ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. ಪತ್ನಿ ಕೃತಿಕಾ ಕಾಲಿಗೆ ಐವಿ ಸಿರಿಂಜ್ ಹಾಕಿ ಉಸಿರನ್ನೇ ನಿಲ್ಲಿಸಿದ್ದ. ಕಿಲಾಡಿ ಮಹೇಂದ್ರ ಅನಸ್ತೇಷಿಯಾ ಬಗ್ಗೆ ಸಂಪೂರ್ಣವಾಗಿ ಅರಿತಿದ್ದ. ಹೀಗಾಗಿ ಪಕ್ಕಾ ಪ್ಲ್ಯಾನ್ ಮಾಡಿಯೇ ಕೃತಿಕಾಳನ್ನ ಸಾಯಿಸಿದ್ದಾನೆ.
ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದ. ಮರಣೋತ್ತರ ಪರೀಕ್ಷೆ ನಡೆಸಿದಾಗ ಆರೋಪಿ ಕೃತಿಕಾಗೆ ಮಿತಿ ಮೀರಿ ಅನಸ್ತೇಶಿಯಾ ನೀಡಿರುವ ವಿಚಾರ ಬಹಿರಂಗವಾಗಿತ್ತು. ಇದೀಗ ಪೊಲೀಸರ ಮುಂದೆ ಆರೋಪಿಯ ಮತ್ತೊಂದು ಕರಾಳ ಮುಖ ಬಯಲಾಗಿದೆ.
ಹೌದು ಹೆಂಡತಿ ವಿಚಾರವಾಗಿ ಮಹೇಂದ್ರ ರೆಡ್ಡಿ ಸ್ನೇಹಿತೆಯೊಂದಿಗೆ ಪದೇ ಪದೇ ಚಾಟ್ ಮಾಡುತ್ತಿದ್ದನೆಂಬ ಮಾಹಿತಿ ಬೆಳಕಿಗೆ ಬಂದಿದೆ.ಪದೇ ಪದೇ ಚಾಟಿಂಗ್ ಮಾಡ್ತಿದ್ದ ಎನ್ನುವ ವಿಚಾರವಾಗಿ ಮಹೇಂದ್ರ ರೆಡ್ಡಿ ವಾಟ್ಸಾಪ್ ಅನ್ನು ಸ್ನೇಹಿತೆ ಬ್ಲಾಕ್ ಮಾಡಿದ್ದರಂತೆ. ಗೆಳತಿ ಬ್ಲಾಕ್ ಮಾಡಿದ್ರೂ ಸುಮ್ಮನಿರದ ಈತ ಫೋನ್ ಪೇನಲ್ಲೂ ಚಾಟ್ ಮಾಡಲು ಶುರು ಮಾಡಿದ್ದ ಎಂದು ತಿಳಿದು ಬಂದಿದೆ.
ಡಾ. ಮಹೇಂದ್ರ ರೆಡ್ಡಿ ತನ್ನ ಹಾಗೂ ಕೃತಿಕಾ ವೈಯಕ್ತಿಕ ವಿಚಾರಗಳ ಬಗ್ಗೆ ಸ್ನೇಹಿತೆ ಜೊತೆ ಚಾಟಿಂಗ್ ನಲ್ಲಿ ಹಂಚಿಕೊಂಡಿದ್ದನಂತೆ. ಇದರಿಂದ ಗೆಳತಿ ಬ್ಲಾಕ್ ಮಾಡಿದ್ರ ಕೂಡ ಫೋನ್ ಪೇನಲ್ಲಿ ಮೆಸೇಜ್ ಮಾಡಿದ್ದನು. ಫೋನ್ ಪೇನಲ್ಲಿ ಮೆಸೇಜ್ಗಳು ಡಿಲೀಟ್ ಆಗಲ್ಲ, ಹೀಗಾಗಿ FSLನಿಂದ ಇಡೀ ಚಾಟಿಂಗ್ ಹಿಸ್ಟರಿ ಬಯಲಾಗಿದೆ. ಇದರ ಜೊತೆ ಕೃತಿಕಾಳ ಮೊಬೈಲ್ ಡಾಟಾ ರಿಟ್ರೀವ್ಗೆ ಪೊಲೀಸರು ಮುಂದಾಗಿದ್ದಾರೆ.
ಮಹೇಂದ್ರ ರೆಡ್ಡಿ ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ಅನ್ನು ಎಫ್ಎಸ್ಎಲ್ ಗೆ ರವಾನೆ ಮಾಡಿದ್ರು. ಕೃತಿಕಾ ಅವರ ಫೋನ್ ಲಾಕ್ ಆಗಿದ್ದರಿಂದ ಲಾಕ್ ಓಪನ್ ಆಗದೇ ಪೊಲೀಸರ ತನಿಖೆಗೆ ಕಷ್ಟವಾಗ್ತಿದೆ. ಐಫೋನ್ ಹಾಗೂ ಲ್ಯಾಪ್ ಟಾಪ್ ಎರಡನ್ನೂ ಓಪನ್ ಮಾಡಿಸೋಕೆ ಪ್ರಯತ್ನ ಮಾಡ್ತಿದ್ದಾರೆ ಎಂದು ತಿಳಿದು ಬಂದಿದೆ.



