HomeGadag Newsದಾನದಿಂದ ಮಾನಸಿಕ ನೆಮ್ಮದಿ ಪ್ರಾಪ್ತಿ: ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು

ದಾನದಿಂದ ಮಾನಸಿಕ ನೆಮ್ಮದಿ ಪ್ರಾಪ್ತಿ: ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ಮಾರ್ಗದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಹತ್ತಿರ ದಿ. ಬಸವರಾಜ ಗೂಳಪ್ಪ ಉಪನಾಳ ಇವರು ಹೂವಿನಶಿಗ್ಲಿ ಮಠಕ್ಕೆ ಭೂದಾನ ಮಾಡಿರುವ 1 ಎಕರೆ ಜಮೀನಿನಲ್ಲಿ ಧಾರ್ಮಿಕ ಪಾಠಶಾಲಾ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮ ಮುಂಡರಗಿಯ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನೆರವೇರಿತು.

ಸಾನ್ನಿಧ್ಯ ವಹಿಸಿದ್ದ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಸಮಾಜದಲ್ಲಿ ಇರುವ ಪ್ರತಿಯೊಬ್ಬರೂ ದಾನಗಳನ್ನು ನೀಡುವ ಗುಣ ಬೆಳೆಸಿಕೊಳ್ಳಬೇಕು. ದಾನದಿಂದ ಮನಸ್ಸಿಗೆ ನೆಮ್ಮದಿ, ಒಳ್ಳೆಯ ಕಾರ್ಯವನ್ನು ಮಾಡಿದ ತೃಪ್ತಿ ದೊರಕುತ್ತದೆ. ಇಂದಿನ ದಿನಗಳಲ್ಲಿ ದಾನ-ಧರ್ಮಗಳಿಂದ ಧಾರ್ಮಿಕ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಬೆಳೆಯುತ್ತಿವೆ. ಕೆಲವರು ಗುಪ್ತದಾನ ಮಾಡುವವರು ಇದ್ದಾರೆ. ಮನಸ್ಸಿನ ತೃಪ್ತಿಗೆ ದಾನ ಮಾಡುವ ಕಾರ್ಯವನ್ನು ಮಾಡಬೇಕೇ ಹೊರತು ಪ್ರಚಾರದ ಉದ್ದೇಶದಿಂದ ದಾನ ಮಾಡುವದು ಬೇಡ. ಉತ್ತಮ ಕಾರ್ಯಗಳನ್ನು ಮಾಡಿರುವ ಪ್ರತಿಯೊಬ್ಬರನ್ನೂ ಸಮಾಜ ಗೌರವಿಸುತ್ತದೆ. ಈ ನಿಟ್ಟಿನಲ್ಲಿ ಮಾಜಿ ಶಾಸಕರಾಗಿದ್ದ ದಿ. ಗೂಳಪ್ಪ ಉಪನಾಳ ಅವರು ಈ ಭಾಗದಲ್ಲಿ ಜನಮುಖಿ ಕಾರ್ಯಗಳಿಂದ ಹೆಸರು ಮಾಡಿದ್ದರು.

ಇದೀಗ ಅವರ ಪುತ್ರ ದಿ. ಬಸವರಾಜ ಗೂಳಪ್ಪ ಉಪನಾಳ ಅವರು ಸಹ ಬಹು ಬೆಲೆ ಬಾಳುವ ಒಂದು ಎಕರೆ ಜಾಗೆಯನ್ನು ಹೂವಿನಶಿಗ್ಲಿ ವಿರಕ್ತಮಠಕ್ಕೆ ಧಾರ್ಮಿಕ ಪಾಠಶಾಲೆಯನ್ನು ನಿರ್ಮಿಸಲು ದಾನವಾಗಿ ನೀಡಿರುವದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ. ಉಪನಾಳ ಕುಟುಂಬ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡಿ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿದ್ದಾರೆ. ಧಾರ್ಮಿಕ ಪಾಠಶಾಲೆ ಈ ಭಾಗದಲ್ಲಿ ಉತ್ತಮ ಹೆಸರು ಮಾಡಲಿ, ಹೂವಿನಶಿಗ್ಲಿ ವಿರಕ್ತಮಠದ ಮೊದಲಿನ ಪಟ್ಟಾಧ್ಯಕ್ಷರಾಗಿದ್ದ ಲಿಂ. ನಿರಂಜನ ಮಹಾಸ್ವಾಮಿಗಳ ಇಷ್ಟದ ಈ ಕಾರ್ಯ ಶ್ರೀ ಚನ್ನವೀರ ಮಹಾಸ್ವಾಮಿಗಳ ನೇತೃತ್ವದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರುಗಳಾದ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ ಅವರು ಮಾತನಾಡಿ, ಉಪನಾಳ ಕುಟುಂಬದವರು ಈ ಭಾಗದಲ್ಲಿ ಧಾರ್ಮಿಕ ಕಾರ್ಯಗಳಿಗೆ ಭೂಮಿಯ ದಾನ ಮಾಡಿರುವ ಅನೇಕ ಉದಾಹರಣೆಗಳಿದ್ದು, ಹೂವಿನಶಿಗ್ಲಿ ವಿರಕ್ತಮಠದಿಂದ ಆರಂಭವಾಗುವ ಧಾರ್ಮಿಕ ಪಾಠಶಾಲೆ ಮತ್ತೊಂದು ಮೈಲಿಗಲ್ಲಾಗಲಿದೆ ಎಂದು ಹೇಳಿದರು.

ಕುಂದಗೋಳ ಕಲ್ಯಾಣಪುರಮಠದ ಅಭಿನವ ಬಸವಣ್ಣಜ್ಜನವರು ನೇತೃತ್ವ ವಹಿಸಿ ಮಾತನಾಡಿ, ಮನುಷ್ಯ ತನ್ನ ಸತ್ಯಶುದ್ಧ ಕಾಯಕದ ಜೊತೆಗೆ ದಾನ, ಧರ್ಮ, ಪರೋಪಕಾರದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅದಕ್ಕೆ ಧರ್ಮಗುರುಗಳ, ಹಿರಿಯರ ಸಂದೇಶ ಮತ್ತು ಮಾರ್ಗದರ್ಶನ ಅವಶ್ಯವಾಗಿದ್ದು, ಅಂತಹ ವಾತಾವರಣ ಸೃಷ್ಟಿಸುವ ಅನಿವಾರ್ಯತೆ ಇಂದು ನಿರ್ಮಾಣವಾಗಿದೆ.

ಜೀವನದಲ್ಲಿ ಧರ್ಮಮಾರ್ಗದ ಮೂಲಕ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜಮುಖಿಯಾಗಿ ಬದುಕು ಸಾಗಿಸಿದಾಗ ಮಾತ್ರ ಜೀವನ ಸಾರ್ಥಕತೆ ಹೊಂದುತ್ತದೆ ಎಂದರು.

ಮಹಾಂತದೇವರು ಉಪಸ್ಥಿತರಿದ್ದರು. ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಪಾರ್ವತಿ ಬಸವರಾಜ ಉಪನಾಳ, ಎಸ್.ಪಿ. ಬಳಿಗಾರ, ಪುಲಕೇಶಿ ಉಪನಾಳ, ಮಹೇಶ್ ಉಪನಾಳ, ಸೋಮೇಶ ಉಪನಾಳ, ರಮೇಶ್ ಉಪನಾಳ, ನಂದಾ ಧರ್ಮಾಯತ, ಡಿ.ಬಿ. ಬಳಿಗಾರ, ಚಂಬಣ್ಣ ಬಾಳಿಕಾಯಿ, ಡಾ. ವಿನೋದ ಹೊನ್ನಿಕೊಪ್ಪ, ಎಲ್.ಎಸ್. ಅರಳಹಳ್ಳಿ, ಡಾ. ಆರ್.ಜಿ. ಚಿಕ್ಕಮಠ, ನಿಂಗಪ್ಪ ಹೆಬಸೂರ, ಮಂಜುನಾಥ ಮಾಗಡಿ, ಹೊನ್ನಪ್ಪ ಒಡ್ಡರ, ನಾಗರಾಜ ಚಿಂಚಲಿ, ರಾಮಣ್ಣ ಲಮಾಣಿ (ಶಿಗ್ಲಿ) ಹಾಗೂ ಪುರಸಭೆ ಸದಸ್ಯರು ಇದ್ದರು.

ಈ ವೇಳೆ ಭೂದಾನಿಗಳಾದ ದಿ. ಬಸವರಾಜ ಉಪನಾಳ ಕುಟುಂಬದವರನ್ನು ಸನ್ಮಾನಿಸಲಾಯಿತು. ಅಶೋಕ ಶಿರಹಟ್ಟಿ ಸ್ವಾಗತಿಸಿದರು. ಸಿದ್ದಯ್ಯ ಶಾಸ್ತ್ರಿಗಳು ಹಿರೇಮಠ ನಿರೂಪಿಸಿದರು.

ಹೂವಿನಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ಲಕ್ಷ್ಮೇಶ್ವರ ಹೂವಿನಶಿಗ್ಲಿ ಮಠದ ತವರಾದಂತಾಗಿದೆ. ಶ್ರೀಮಠದ ಶ್ರೇಯೋಭಿವೃದ್ಧಿಗಾಗಿ ಈ ಭಾಗದ ಜನ ಸಹಾಯ-ಸಹಕಾರ ನೀಡುತ್ತಿರುವುದು ಸಂತಸ ತಂದಿದೆ. ಪಟ್ಟಣದ ಮಹಾನ್ ದಾನಿಗಳಾದ ಉಪನಾಳ ಕುಟುಂಬದವರು ದಾನರೂಪದಲ್ಲಿ ನೀಡಿದ ಜಮೀನಿನಲ್ಲಿ ಧಾರ್ಮಿಕ ಪಾಠಶಾಲಾ ಕಟ್ಟಡ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!