HomeCrime NewsBengaluruನಲ್ಲಿ ಹುಸಿ ಬಾಂಬ್ ಬೆದರಿಕೆ ಮಾಡುತ್ತಿದ್ದ ಆರೋಪಿತೆ ಅರೆಸ್ಟ್.!

Bengaluruನಲ್ಲಿ ಹುಸಿ ಬಾಂಬ್ ಬೆದರಿಕೆ ಮಾಡುತ್ತಿದ್ದ ಆರೋಪಿತೆ ಅರೆಸ್ಟ್.!

For Dai;y Updates Join Our whatsapp Group

ಬೆಂಗಳೂರು: ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪದಲ್ಲಿ ಗುಜರಾತ್ ಮೂಲದ ಮಹಿಳೆಯನ್ನು ಅರೆಸ್ಟ್‌ ಮಾಡಲಾಗಿದೆ. ರೆನಿ ಜೊಶೀಲ್ಡಾ ಬಂಧಿತ ಆರೋಪಿತೆಯಾಗಿದ್ದು, ಯುವಕ ಪ್ರೀತಿ ನಿರಾಕರಿಸಿದ್ದಕ್ಕೆ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದು ಬಂದಿದೆ.

ಆರೋಪಿತೆ ಸಾಫ್ಟ್‌ವೇರ್ ಇಂಜಿನಿಯರ್ ಉದ್ಯೋಗಿ. ಬೆಂಗಳೂರಿನ ಪಬ್ಲಿಕ್ ಶಾಲೆಯೊಂದಕ್ಕೆ ಇಮೇಲ್ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಳು.  ಜೂ.14 ರಂದು ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಗೆ ಬಾಂಬ್ ಬೆದರಿಕೆ ಕರೆಬಂದಿತ್ತು. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸ್ ಆಯುಕ್ತರು, ಉತ್ತರ ವಿಭಾಗ ಸೈಬರ್ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿದ್ದರು.

ಆರೋಪಿತೆಯ ಪ್ರೀತಿ ನಿರಾಕರಣೆ ಮಾಡಿದ ಯುವಕನ ಸಂಕಷ್ಟಕ್ಕೆ ಸಿಕ್ಕಿಸಲು ಈ ಕೃತ್ಯ ಎಸಗಿದ್ದಾಳೆ. ಯುವಕನ ಇಮೇಲ್ ಐಡಿ ಬಳಸಿಕೊಂಡು ಹುಸಿಬಾಂಬ್ ಇಮೇಲ್ ಬೆದರಿಕೆ ಕಳಿಸಿದ್ದಳು. ಯುವಕನನ್ನ ಪದೇ ಪದೇ ಪ್ರೀತಿ ಮಾಡುವಂತೆ ಒತ್ತಾಯ ಮಾಡ್ತಿದ್ದಳು. ಆರೋಪಿತೆಯ ಪ್ರೀತಿ ಮತ್ತು ಗೆಳೆತನವನ್ನು ಯುವಕ ನಿರಾಕರಿಸಿದ್ದ. ಇದೇ ದ್ವೇಷಕ್ಕೆ ಆತನ ಹೆಸರಲ್ಲಿ ಹುಸಿಬಾಂಬ್ ಬೆದರಿಕೆ ಕಳುಹಿಸಿದ್ದಾಳೆ.

ಆರೋಪಿತೆ VPN, ಇಂಟರನೆಟ್ ಬಳಕೆ ಮಾಡುತ್ತಿದ್ದಳು. ಗೇಟ್ ಕೋಡ್ ಎಂಬ ಅಪ್ಲೀಕೇಶನ್‌ನ ವರ್ಚುವಲ್ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದಳು. ಸುಮಾರು ಆರರಿಂದ ಏಳು ವಾಟ್ಸಪ್ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದಳು. ಬಾಂಡಿ ವಾರೆಂಟ್ ಮುಖಾಂತರ ಗುಜರಾತ್‌ನಿಂದ ಕರೆದುಕೊಂಡು ಬಂದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಬೆಂಗಳೂರಿನ ಕಲಾಸಿಪಾಳ್ಯ ಸೇರಿ ಇತರೆ ಆರು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆರೋಪಿತಳ ವಿರುದ್ಧ ಗುಜರಾತ್, ಮೈಸೂರು, ತಮಿಳುನಾಡಿನ ಚೆನ್ನೈನಲ್ಲಿ ಹುಸಿಬಾಂಬ್ ಬೆದರಿಕೆ ಪ್ರಕರಣ ದಾಖಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img