ವಿಜಯಸಾಕ್ಷಿ ಸುದ್ದಿ, ಗದಗ: ಕೆ.ಎಸ್.ಸಿ.ಎ ಆಶ್ರಯದಲ್ಲಿ ನಡೆದ 14 ವರ್ಷದ ವಯೋಮಿತಿಯ ಕ್ರಿಕೆಟ್ ಪಂದ್ಯದಲ್ಲಿ ಗದಗ ಸ್ಪೋರ್ಟ್ಸ್ ಅಕಾಡೆಮಿ ತಂಡ ಜಯ ಗಳಿಸಿದೆ.
ಹುಬ್ಬಳ್ಳಿ ತಂಡ ಟಾಸ್ ಗೆದ್ದು, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು, ಗದಗ ತಂಡ 31 ಓವರ್‌ಗೆ 105 ರನ್ ಗಳಿಸಿತು. ಗದಗ ಪರ ಮೂಬಾಶೀರ್ 23, ಓಂ ಪವಾರ 17 ರನ್ ಮಾಡಿದರು. ಉತ್ತರವಾಗಿ ಗದಗ ತಂಡ ಹುಬ್ಬಳ್ಳಿ ತಂಡವನ್ನು 41 ರನ್‌ಗೆ ಆಲ್‌ಔಟ್ ಮಾಡಿತು. ಗದಗ ತಂಡದ ಬೌಲರ್ ನೌಮಾನ್ ಹೊನ್ನಾಪುರ 7 ಓವರ್‌ಗೆ 17 ರನ್ ನೀಡಿ ಪ್ರಮುಖ 5 ವಿಕೆಟ್ ಕಬಳಿಸಿದರು. ವೇದಾಂತು 1.1 ಓವರ್ ಬೌಲಿಂಗ್ ಮಾಡಿ ಹ್ಯಾಟ್ರಿಕ್ ಮೂಲಕ 4 ವಿಕೆಟ್ ಪಡೆದರು. ಪೃಥ್ವಿ ಚಪ್ಪರಮಣಿ 1 ವಿಕೆಟ್ ಪಡೆದು ಗೆಲುವು ಕಂಡರು.



