HomeSports NewsIND vs SA: ಸತತ ಎರಡನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ! ಸಚಿನ್ ದಾಖಲೆ ಮುರಿದ...

IND vs SA: ಸತತ ಎರಡನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ! ಸಚಿನ್ ದಾಖಲೆ ಮುರಿದ ರನ್ ಮಷಿನ್

For Dai;y Updates Join Our whatsapp Group

Spread the love

ರಾಯ್‌ಪುರ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಮತ್ತೊಮ್ಮೆ ಅದ್ಭುತ ಶತಕ ಬಾರಿಸಿದ್ದಾರೆ. ರಾಂಚಿಯಲ್ಲಿ ಮೊದಲ ಪಂದ್ಯದಲ್ಲಿ ಗಳಿಸಿದ ಶತಕದ ಫಾರ್ಮ್ ಅನ್ನು ಮುಂದುವರಿಸಿದ್ದ ಕೊಹ್ಲಿ, ರಾಯ್‌ಪುರದಲ್ಲೂ ODI ವೃತ್ತಿಜೀವನದ 53ನೇ ಶತಕ ಬಾರಿಸಿ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದರು.

ಟಿ-20 ಶೈಲಿಯ ದಾಟಿಯಲ್ಲಿ ಆಟವಾಡಿದ ಕೊಹ್ಲಿ, 110.99 ಸ್ಟ್ರೈಕ್ರೇಟ್ ನಲ್ಲಿ 91 ಎಸೆತಗಳನ್ನು ಎದುರಿಸಿ 2 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 101 ರನ್ ಬಾರಿಸಿದರು. ಶತಕ ಪೂರೈಸಿದ ನಂತರ ಹೆಚ್ಚು ಸಮಯ ಕ್ರೀಸ್‌ನಲ್ಲಿ ಉಳಿಯದೆ, ಕೊನೆಗೆ 93 ಎಸೆತಗಳಲ್ಲಿ 102 ರನ್ ಗಳಿಸಿ ಔಟಾದರು.

ಕೊಹ್ಲಿ ತಮ್ಮ ನಾಲ್ಕನೇ ಎಸೆತದಲ್ಲಿ ಪ್ರಬಲವಾದ ಪುಲ್ ಶಾಟ್ ಹೊಡೆದು ಸಿಕ್ಸರ್ ಬಾರಿಸಿ ತಮ್ಮ ಖಾತೆಯನ್ನು ತೆರೆದರು. ಅಲ್ಲಿಂದ ಹೊಡಿಬಡಿ ಆಟವನ್ನು ಮುಂದುವರೆಸಿದ ಕೊಹ್ಲಿ 47 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಸ್ವಲ್ಪ ಸಮಯದಲ್ಲೇ ತಮ್ಮ ಏಕದಿನ ಕ್ರಿಕೆಟ್‌ನ 53 ನೇ ಶತಕವನ್ನು ಪೂರೈಸಿದರು.

38 ನೇ ಓವರ್‌ನ ಕೊನೆಯ ಎಸೆತದಲ್ಲಿ ಕೊಹ್ಲಿ ಒಂದು ರನ್ ತೆಗೆದುಕೊಂಡು ಎಂದಿನಂತೆ ತಮ್ಮ ನಿಶ್ಚಿತಾರ್ಥದ ಉಂಗುರವನ್ನು ಹೊರತೆಗೆದು, ಅದನ್ನು ಚುಂಬಿಸಿ, ಆಕಾಶದತ್ತ ನೋಡುತ್ತಾ ಮತ್ತು ದೇವರಿಗೆ ಧನ್ಯವಾದ ಹೇಳುವ ಮೂಲಕ ತಮ್ಮ 53 ನೇ ಏಕದಿನ ಶತಕವನ್ನು ಆಚರಿಸಿದರು.

ಈ ಬಾರಿ ವಿರಾಟ್ ಕೊಹ್ಲಿ ತಮ್ಮ ಶತಕವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗದಿದ್ದರೂ, 93 ಎಸೆತಗಳಲ್ಲಿ 102 ರನ್ ಗಳಿಸಿ ಔಟಾದರು. ಆದರೆ ಈ ಶತಕದ ಇನ್ನಿಂಗ್ಸ್ ಮೂಲಕ ಕೆಲವು ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದರು. ಮೊದಲನೆಯದಾಗಿ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ಏಕದಿನ ದಾಖಲೆಯನ್ನು ಮುರಿದರು. ಸಚಿನ್ 45 ಶತಕಗಳೊಂದಿಗೆ ಆರಂಭಿಕನಾಗಿ ಅತಿ ಹೆಚ್ಚು ಏಕದಿನ ಶತಕಗಳನ್ನು ಗಳಿಸಿದ್ದರು. ಈಗ, ಕೊಹ್ಲಿ 3 ನೇ ಕ್ರಮಾಂಕದಲ್ಲಿ ತಮ್ಮ 46 ನೇ ಶತಕವನ್ನು ಗಳಿಸುವ ಮೂಲಕ ಅವರನ್ನು ಹಿಂದಿಕ್ಕಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!