ಗದಗ: ಇರಾನ್-ಇಸ್ರೇಲ್-ಅಮೇರಿಕ ನಡುವೆ ಯುದ್ಧ ಹಿನ್ನಲೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಪೆಟ್ರೋಲ್ ಅಭಾವ ಉಂಟಾಗಿದೆ.
ಪಟ್ಟಣದ ಶಿವಾಜಿ ಸರ್ಕಲ್ ಸಮೀಪದ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಸಂಪೂರ್ಣ ಖಾಲಿಯಾಗಿದ್ದು, ನೋ ಸ್ಟಾಕ್ ಬೋರ್ಡ್ ಅಳವಡಿಸಲಾಗಿದೆ.
ನಿನ್ನೆ ರಾತ್ರಿ ಪೆಟ್ರೋಲ್ ಖಾಲಿಯಾಗಿದ್ದು, ಬಂಕ್ ಗೆ ಬಂದ ಗ್ರಾಹಕರನ್ನು ಸಿಬ್ಬಂದಿ ವಾಪಸ್ ಕಳುಹಿಸುತ್ತಿದ್ದಾರೆ.
ಇದಲ್ಲದೆ, ಇನ್ನೂ ಎರಡು ಪೆಟ್ರೋಲ್ ಬಂಕ್ಗಳಲ್ಲೂ ಪೆಟ್ರೋಲ್ ಲಭ್ಯವಿಲ್ಲ ಎನ್ನಲಾಗಿದ್ದು, ಇದರಿಂದ ಬೈಕ್ ಹಾಗೂ ಕಾರ್ ಮಾಲಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹುಬ್ಬಳ್ಳಿ ರಸ್ತೆಯಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ದೊರೆಯುತ್ತಿರುವ ಹಿನ್ನೆಲೆಯಲ್ಲಿ ವಾಹನಗಳು ಮುಗಿಬಿದ್ದಿದ್ದು, ಸರತಿ ಸಾಲಿನಲ್ಲಿ ನಿಂತು ಬೈಕ್ ಗೆ ಸವಾರರು ಪೆಟ್ರೋಲ್ ಹಾಕಿಸುತ್ತಿದ್ದಾರೆ. ಯುದ್ಧದ ಎಫೆಕ್ಟ್ ಬೈಕ್ ಹಾಗೂ ಕಾರ್ ಸವಾರರಿಗೂ ತಟ್ಟಿದೆ.



