HomeLife Styleಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಎಸೆಯುತ್ತಿದ್ದೀರಾ!? ಹಾಗಿದ್ರೆ ಈ ತಪ್ಪು ಮಾಡ್ಬೇಡಿ! ಬಗೆ ಬಗೆಯ ತಿನಿಸು...

ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಎಸೆಯುತ್ತಿದ್ದೀರಾ!? ಹಾಗಿದ್ರೆ ಈ ತಪ್ಪು ಮಾಡ್ಬೇಡಿ! ಬಗೆ ಬಗೆಯ ತಿನಿಸು ತಯಾರಿಸಿ

For Dai;y Updates Join Our whatsapp Group

Spread the love

ಸುಡು ಬೇಸಿಗೆಯಲ್ಲಿ ತಂಪಾಗಿರಲು ಜನರು ಹೆಚ್ಚಾಗಿ ಆಯ್ಕೆ ಮಾಡುವ ಹಣ್ಣು ಕಲ್ಲಂಗಡಿ.

ದೇಹವನ್ನು ತಂಪಾಗಿಡುವುದರ ಜೊತೆಗೆ ಆರೋಗ್ಯಕ್ಕೂ ಉಪಕಾರಿ ಆಗಿರುವ ಈ ಹಣ್ಣು ಬೇಸಿಗೆ ವೇಳೆ ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಾಗುತ್ತದೆ.

ಆದರೆ, ಕಲ್ಲಂಗಡಿ ಹಣ್ಣನ್ನು ತಿಂದ ನಂತರ ಅದರ ಸಿಪ್ಪೆಯನ್ನು ಬಹುತೇಕರು ಕಸದ ಬುಟ್ಟಿಗೆ ಎಸೆಯುತ್ತಾರೆ. ವಾಸ್ತವವಾಗಿ, ಈ ಸಿಪ್ಪೆಯಿಂದಲೇ ಹಲವು ರುಚಿಕರ ಹಾಗೂ ಆರೋಗ್ಯಕರ ರೆಸಿಪಿಗಳನ್ನು ತಯಾರಿಸಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ.

ಜಾಮ್ ತಯಾರಿ ಸುಲಭ
ಕಲ್ಲಂಗಡಿ ಸಿಪ್ಪೆಯಿಂದ ರುಚಿಯಾದ ಜಾಮ್ ಮಾಡಬಹುದು. ಮೊದಲು ಸಿಪ್ಪೆಯ ಹಸಿರು ಪದರ ತೆಗೆದು ಒಳಗಿನ ಭಾಗವನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಇದಕ್ಕೆ ಸಕ್ಕರೆ, ನಿಂಬೆ ರಸ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ಜೆಲ್ಲಿ ಹದಕ್ಕೆ ಬರುವವರೆಗೆ ಕುದಿಸಿದರೆ ಸವಿಯಾದ ಜಾಮ್ ಸಿದ್ಧ. ದಾಲ್ಚಿನ್ನಿ ಸೇರಿಸಿದರೆ ಸುವಾಸನೆ ಹೆಚ್ಚುತ್ತದೆ.

ಉಪ್ಪಿನಕಾಯಿ ಹೊಸ ರುಚಿ
ಮಾವು, ನಿಂಬೆ ಮಾದರಿಯಲ್ಲೇ ಕಲ್ಲಂಗಡಿ ಸಿಪ್ಪೆಯಿಂದಲೂ ಉಪ್ಪಿನಕಾಯಿ ಮಾಡಬಹುದು. ಸಿಪ್ಪೆಯನ್ನು ತುಂಡುಗಳಾಗಿ ಕತ್ತರಿಸಿ ಸಾಂಪ್ರದಾಯಿಕ ವಿಧಾನದಲ್ಲಿ ಮಸಾಲೆ ಸೇರಿಸಿ ತಯಾರಿಸಿದರೆ ವಿಶಿಷ್ಟ ರುಚಿ ಸಿಗುತ್ತದೆ.

ಚಟ್ನಿ ಕೂಡ ಸವಿಯಬಹುದು
ಕಲ್ಲಂಗಡಿ ಸಿಪ್ಪೆಯಿಂದ ಚಟ್ನಿ ಕೂಡ ತಯಾರಿಸಬಹುದು. ಸಣ್ಣ ತುಂಡುಗಳಾಗಿ ಕತ್ತರಿಸಿದ ಸಿಪ್ಪೆಗೆ ಉಪ್ಪು, ಮೆಣಸಿನಕಾಯಿ, ಶುಂಠಿ ಹಾಗೂ ಇಷ್ಟದ ಮಸಾಲೆಗಳನ್ನು ಸೇರಿಸಿ ರುಬ್ಬಿದರೆ ರುಚಿಕರ ಚಟ್ನಿ ಸಿದ್ಧವಾಗುತ್ತದೆ.

ಇದರ ಜೊತೆಗೆ ಕಲ್ಲಂಗಡಿ ಸಿಪ್ಪೆಯಿಂದ ಪಲ್ಯ, ಹಲ್ವಾ, ಟುಟ್ಟಿ ಫ್ರೂಟಿ ಮುಂತಾದ ಹಲವು ಪದಾರ್ಥಗಳನ್ನು ತಯಾರಿಸಬಹುದು.

ಒಟ್ಟಿನಲ್ಲಿ, ಕಸದ ಬುಟ್ಟಿಗೆ ಹೋಗುವ ಕಲ್ಲಂಗಡಿ ಸಿಪ್ಪೆಯನ್ನು ಬಳಸಿ ರುಚಿಕರ ಪದಾರ್ಥಗಳನ್ನು ತಯಾರಿಸುವ ಮೂಲಕ ಆಹಾರ ವ್ಯರ್ಥತೆಯನ್ನು ಕಡಿಮೆ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!