ಹಾವೇರಿ: ಜಿಲ್ಲೆಯ ರಾಣಿಬೇನ್ನೂರಿನ ಆಟೋ ಚಾಲಕ ನಾಗರಾಜ ನರಸಪ್ಪ ಆರೇರ ಅವರ ಪುತ್ರಿ ಆಶಾ ನಾಗರಾಜ ಆರೇರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 585 ಅಂಕಗಳನ್ನು ಗಳಿಸಿ ಸಾಧನೆ ಮೆರೆದಿದ್ದಾಳೆ.
ಹಗಲು-ರಾತ್ರಿ ಆಟೋ ಓಡಿಸಿ ಮಗಳನ್ನು ಓದಿಸಿದ ತಂದೆ ನಾಗರಾಜ ಅವರ ಪರಿಶ್ರಮಕ್ಕೆ ಮಗಳು ಉತ್ತಮ ಫಲಿತಾಂಶದ ಮೂಲಕ ಪ್ರತಿಫಲ ನೀಡಿದ್ದಾಳೆ. ಮಗಳ ಸಾಧನೆಯನ್ನು ಕಂಡು ಕುಟುಂಬ ಸದಸ್ಯರು ಕಣ್ಣೀರಿಟ್ಟರು.
ತಾಯಿ ರಾಧಾ ಹಾಗೂ ತಂದೆ ನಾಗರಾಜ ಅವರು ಆಶಾಳ ಓದಿಗೆ ನಿರಂತರ ಪ್ರೋತ್ಸಾಹ ನೀಡಿ ಸಾಥ್ ನೀಡಿದ್ದರು. ಅವರ ಕನಸು ನನಸಾಗುವಂತೆ ಆಶಾ ಉತ್ತಮ ಅಂಕಗಳನ್ನು ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ವೈದ್ಯೆಯಾಗುವ ಕನಸು ಹೊಂದಿರುವ ಆಶಾ, ಮುಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಂಕಲ್ಪ ವ್ಯಕ್ತಪಡಿಸಿದ್ದಾಳೆ.



