HomeGadag Newsಮೋದಿ ಹೇಳಿಕೆಗಳಿಂದ ಜನರಲ್ಲಿ ಭೀತಿ! ಚಿನ್ನ ಖರೀದಿಸಬೇಡಿ ಎಂದಿರುವ ಹಿಂದಿನ ಕಾರಣ ಬಹಿರಂಗಪಡಿಸಿ: ಸಚಿವ ಎಚ್....

ಮೋದಿ ಹೇಳಿಕೆಗಳಿಂದ ಜನರಲ್ಲಿ ಭೀತಿ! ಚಿನ್ನ ಖರೀದಿಸಬೇಡಿ ಎಂದಿರುವ ಹಿಂದಿನ ಕಾರಣ ಬಹಿರಂಗಪಡಿಸಿ: ಸಚಿವ ಎಚ್. ಕೆ ಪಾಟೀಲ್ ಸವಾಲ್

For Dai;y Updates Join Our whatsapp Group

Spread the love

ಗದಗ: ಚಿನ್ನ ಖರೀದಿಸಬೇಡಿ ಹಾಗೂ ಸಮೂಹ ಸಾರಿಗೆ ಬಳಸಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಹೇಳಿಕೆಗಳು ಜನರಲ್ಲಿ ಅನಗತ್ಯ ಭೀತಿ ಮತ್ತು ಆತಂಕವನ್ನು ಉಂಟುಮಾಡುತ್ತಿವೆ ಎಂದು ರಾಜ್ಯ ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಆರೋಪಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ತೈಲ ಅಭಾವ ಉಂಟಾಗುವ ರೀತಿಯ ಸಂದೇಶಗಳು ಪ್ರಧಾನಿ ಹೇಳಿಕೆಗಳಿಂದ ಹೊರಬರುತ್ತಿವೆ ಎಂದು ಟೀಕಿಸಿದರು. ಇಂತಹ ಗಂಭೀರ ವಿಷಯಗಳನ್ನು ಸಾರ್ವಜನಿಕವಾಗಿ ಹೇಳುವ ಮೊದಲು ಸಂಸತ್ತಿನಲ್ಲಿ ಚರ್ಚಿಸಬೇಕಿತ್ತು ಎಂದು ಅವರು ಹೇಳಿದರು.

ಪ್ರಧಾನಿಯವರು ಕೇವಲ ಎಚ್ಚರಿಕೆ ನೀಡುವುದಷ್ಟೇ ಅಲ್ಲದೆ, ಅದನ್ನು ಎದುರಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಬೇಕು. ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ದೊಡ್ಡ ಅಪಾಯದ ಸನ್ನಿವೇಶಗಳು ಗೋಚರಿಸುತ್ತಿಲ್ಲವಾದರೂ ಇಂತಹ ಹೇಳಿಕೆಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂದು ಹೇಳಿದರು.

ಹಿಂದೆ ನೋಟು ಅಮಾನ್ಯೀಕರಣದ ಮೂಲಕ ಜನರನ್ನು ಸಂಕಷ್ಟಕ್ಕೆ ದೂಡಲಾಗಿತ್ತು ಎಂದು ಉಲ್ಲೇಖಿಸಿದ ಅವರು, ಈಗ ಚಿನ್ನ ಖರೀದಿಸಬೇಡಿ ಎಂಬ ಹೇಳಿಕೆಗಳ ಹಿಂದಿನ ಉದ್ದೇಶವನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಬೆಂಗಳೂರಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಹೇಳಿಕೆ ನೀಡಿರುವುದನ್ನೂ ಅವರು ಟೀಕಿಸಿದರು. ಧಾರ್ಮಿಕ ವೇದಿಕೆಯಲ್ಲಿ ರಾಜಕೀಯ ಮಾತನಾಡುವುದು ಪ್ರಧಾನಿ ಹುದ್ದೆಗೆ ಶೋಭೆಯಲ್ಲ ಎಂದು ಹೇಳಿದರು.

ಬೇರೆ ಪಕ್ಷಗಳ ಆಂತರಿಕ ವಿಚಾರಗಳಲ್ಲಿ ಪ್ರಧಾನಿ ಆಸಕ್ತಿ ತೋರಿಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಪ್ರಧಾನಿ ಮೋದಿಯವರಿಗೆ ಏಕೆ ಭಯ ಎಂದು ಪ್ರಶ್ನಿಸಿದರು. “ಚಿನ್ನ ಖರೀದಿಸಬೇಡಿ, ಸಮೂಹ ಸಾರಿಗೆ ಬಳಸಿ ಎಂಬ ಪ್ರಧಾನಿ ಮೋದಿ ಹೇಳಿಕೆಗಳು ಜನರಲ್ಲಿ ಅನಗತ್ಯ ಆತಂಕ ಸೃಷ್ಟಿಸುತ್ತಿವೆ. ಇದರ ಹಿಂದಿನ ನಿಜವಾದ ಕಾರಣವನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಎಚ್.ಕೆ. ಪಾಟೀಲ್ ಹೇಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!