ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ ಗಣತಿ ನಮೂನೆ ವಾಪಸ್ ಸಲ್ಲಿಸಲು ಇಂದು ಸಂಜೆ 4 ಗಂಟೆಯವರೆಗೆ ಮಾತ್ರ ಅವಕಾಶ ಇದೆ.
ಈಗಾಗಲೇ ಬೂತ್ ಮಟ್ಟದ ಅಧಿಕಾರಿ (BLO) ಮೂಲಕ ಫಾರ್ಮ್ ಪಡೆದಿರುವ ಮತದಾರರು ಅಗತ್ಯ ಮಾಹಿತಿ ಭರ್ತಿ ಮಾಡಿ, ಸಹಿ ಹಾಕಿ ನಿಗದಿತ ಸಮಯದೊಳಗೆ BLOಗೆ ಸಲ್ಲಿಸಬೇಕು.
ನಿಮ್ಮ ಹೆಸರು ASDDO ಪಟ್ಟಿಯಲ್ಲಿದೆಯೇ?
SIR ಪ್ರಕ್ರಿಯೆಯಲ್ಲಿ ಕೆಲವು ಮತದಾರರನ್ನು ASDDO ವರ್ಗಕ್ಕೆ ಸೇರಿಸಲಾಗಿದೆ. ಇದರಲ್ಲಿ:
-
Absent (A) – 15,30,449
-
Permanently Shifted (S) – 65,62,586
-
Death (D) – 16,38,600
-
Duplicate (D) – 7,07,095
-
Others (O) – 3,95,865
ನಿಮ್ಮ ಹೆಸರು ಈ ಪಟ್ಟಿಯಲ್ಲಿದ್ದರೆ ತಕ್ಷಣ BLO ಅಥವಾ ಚುನಾವಣಾ ನೋಂದಣಾಧಿಕಾರಿ (ERO) ಅವರನ್ನು ಸಂಪರ್ಕಿಸಿ ಗಣತಿ ನಮೂನೆ ಸಲ್ಲಿಸಿ ರೋಲ್‌ಬ್ಯಾಕ್ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ನಿಮ್ಮ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳದೇ ಹೋಗುವ ಸಾಧ್ಯತೆ ಇದೆ.
1.08 ಕೋಟಿ ಹೆಸರು ರದ್ದಾಗುವ ಸಾಧ್ಯತೆ:
ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದಾರೆ. ಇವರಲ್ಲಿ 1,08,34,595 (19.55%) ಮಂದಿಯನ್ನು ASDDO ವರ್ಗಕ್ಕೆ ಸೇರಿಸಲಾಗಿದೆ. ಉಳಿದ 4,45,97,719 ಮತದಾರರ ಹೆಸರು ಕರಡು ಪಟ್ಟಿಯಲ್ಲಿ ಮುಂದುವರಿಯಲಿದೆ.
ಸ್ಥಳಾಂತರವಾಗಿದ್ದರೆ Form-6 ಅವಕಾಶ:
ಶಾಶ್ವತವಾಗಿ ಸ್ಥಳಾಂತರಗೊಂಡಿರುವ 65.62 ಲಕ್ಷ ಮಂದಿ ಅಗತ್ಯ ದಾಖಲೆಗಳೊಂದಿಗೆ Form-6 ಸಲ್ಲಿಸಿದರೆ ಪರಿಶೀಲನೆಯ ಬಳಿಕ ಮತದಾರರ ಪಟ್ಟಿಗೆ ಮತ್ತೆ ಹೆಸರು ಸೇರಿಸಿಕೊಳ್ಳಬಹುದು. ಹೊಸ ಮತದಾರರಿಗೂ Form-6 ಮೂಲಕ ನೋಂದಣಿ ಅವಕಾಶವಿದೆ.
ಮುಂದಿನ ವೇಳಾಪಟ್ಟಿ:
-
ಆ.17: ಮನೆ-ಮನೆ ಭೇಟಿ ಹಾಗೂ ರೋಲ್‌ಬ್ಯಾಕ್ ಅಂತಿಮ ದಿನ
-
ಆ.24: ಕರಡು ಮತದಾರರ ಪಟ್ಟಿ ಪ್ರಕಟ
-
ಆ.24 ರಿಂದ ಸೆ.23: ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಸಲ್ಲಿಕೆ
-
ಅ.27: ಅಂತಿಮ ಮತದಾರರ ಪಟ್ಟಿ ಪ್ರಕಟ
ಮತದಾರರು ತಮ್ಮ ಹೆಸರು ಯಾವ ವರ್ಗದಲ್ಲಿ ದಾಖಲಾಗಿದೆ ಎಂಬುದನ್ನು ತಕ್ಷಣ ಪರಿಶೀಲಿಸಿ, ಅಗತ್ಯವಿದ್ದರೆ ಇಂದು ಸಂಜೆ 4 ಗಂಟೆಯೊಳಗೆ ಕ್ರಮ ಕೈಗೊಳ್ಳುವುದು ಸೂಕ್ತ.



